ಕನ್ನಡದ ಬಿಗ್ ಸ್ಟಾರ್ ಗಳ ಸಿನಿಮಾದಲ್ಲಿ ಅವಕಾಶ ಪಡೆದ ಮಯೂರಿ

ಬೆಂಗಳೂರು: ‘ಕೃಷ್ಣಲೀಲಾ’ ಖ್ಯಾತಿಯ ಮಯೂರಿ ಸ್ಯಾಂಡಲ್ ವುಡ್ ನಲ್ಲಿ ಮತ್ತಷ್ಟು ಬ್ಯುಸಿಯಾಗುತ್ತಿದ್ದಾರೆ. ದೊಡ್ಡ ದೊಡ್ಡ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದುಕೊಳ್ಳುತ್ತಿದ್ದಾರೆ.

‘ಕರಿಯ-2’ ಚಿತ್ರದ ನಂತರ ‘ಗರ್ಲ್ ನಾಟ್ ಸಿನ್’ ಎಂಬ ಇಂಗ್ಲಿಷ್ ಮ್ಯೂಸಿಕ್ ಆಲ್ಬಂನಲ್ಲಿ ಮಯೂರಿ ಹೆಜ್ಜೆ ಹಾಕಿದ್ದರು. ಈ ಮಧ್ಯೆ ಕನ್ನಡದ ಬಿಗ್ ಪ್ರಾಜೆಕ್ಟ್ ಗಳಲ್ಲಿ ಮಯೂರಿ ನಟಿಸುತ್ತಿದ್ದು, ಈಗ ಮತ್ತೊಬ್ಬ ಸೂಪರ್ ಸ್ಟಾರ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.

ದಕ್ಷಿಣ ಭಾರತದಲ್ಲಿ ಖ್ಯಾತ ಸಾಹಸ ನಿರ್ದೇಶಕರೊಬ್ಬರು ನಿರ್ದೇಶನ ಮಾಡುತ್ತಿರುವ ಈ ಚಿತ್ರಕ್ಕೆ ಮಯೂರಿ ಎಂಟ್ರಿ ಕೊಟ್ಟಿದ್ದಾರೆ. ಇದು ಈಕೆಯ ಕನಸು ಕೂಡ ಆಗಿತ್ತು. ಇದೀಗ ಬಹುದಿನಗಳ ಆಸೆ ನೆರವೇರಿದ್ದು, ಸ್ಯಾಂಡಲ್ ವುಡ್ ಚಕ್ರವರ್ತಿಯ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದೆ.

ಪ್ರಸ್ತುತ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೊಂದಿಗೆ ನಟಿಸುವ ಅವಕಾಶ ಕೂಡ ಪಡೆದುಕೊಂಡಿದ್ದಾರೆ. ಸಾಹಸ ನಿರ್ದೇಶಕ ರವಿವರ್ಮ ನಿರ್ದೇಶನ ಮಾಡಲಿರುವ ರುಸ್ತಂ ಚಿತ್ರದಲ್ಲಿ ನಟಿ ಮಯೂರಿ ನಟಿಸಲಿದ್ದಾರೆ. ಈಗಾಗಲೇ ಶ್ರದ್ಧಾ ಶ್ರೀನಾಥ್ ಆಯ್ಕೆಯಾಗಿದ್ದು, ಮುಖ್ಯ ಪಾತ್ರವೊಂದಕ್ಕೆ ಮಯೂರಿ ಕೂಡ ರುಸ್ತುಂ ಸೇರಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಮಯೂರಿ, ಇದೇ ಮೊದಲ ಬಾರಿಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆಯಲ್ಲಿ ಸ್ಕ್ರೀನ್ ಶೇರ್ ಮಾಡಿಕೊಳ್ಳುತ್ತಿರುವ ನನಗೆ ಈ ಸಿನಿಮಾ ಮೈಲಿಗಲ್ಲಾಗುವುದು ಎಂದು ಸಂತಸ ಹಂಚಿಕೊಂಡಿದ್ದಾರೆ.

ಪ್ರಸ್ತುತ ಮಯೂರಿ ನಟ ಜಗ್ಗೇಶ್ ಅವರ ನಟಿಸುತ್ತಿರುವ 8ಎಂಎಂ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಚಿತ್ರದ ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದೆ. ಈಗಾಗಲೇ ಸಂಚಾರಿ ವಿಜಯ್ ಅವರೊಂದಿಗೆ ಆಟಕ್ಕುಂಟು ಲೆಕ್ಕಲಿಲ್ಲ ಚಿತ್ರದಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಅಭಿನಯದ ಜಾನಿ ಜಾನಿ ಎಸ್ ಪಪ್ಪಾ ಚಿತ್ರದಲ್ಲಿ ನಟಿ ಮಯೂರಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ.

Comments

Leave a Reply

Your email address will not be published. Required fields are marked *