ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 5.5 ಲಕ್ಷ ರೂ. ಹಣ ಜಪ್ತಿ

ಚಿಕ್ಕಬಳ್ಳಾಪುರ: ಸೂಕ್ತ ದಾಖಲೆಗಳಿಲ್ಲದೇ ಆಕ್ರಮವಾಗಿ ಕಾರಿನಲ್ಲಿ ಹಣ ಸಾಗಿಸುತ್ತಿದ್ದ ಮೂವರನ್ನು ಬಂಧಿಸಿ, ಹಣವನ್ನು ವಶಕ್ಕೆ ಪಡೆದಿರುವ ಘಟನೆ ಜಿಲ್ಲೆಯ ಚದಲಪುರ ಚೆಕ್‍ಪೋಸ್ಟ್ ಬಳಿ ನಡೆದಿದೆ.

ಘಟನೆಯಲ್ಲಿ ಹಣ ಸಾಗಿಸುತ್ತಿದ್ದ ಮರಸನಪಲ್ಲಿ ಗ್ರಾಮದ ಹರೀಶ್ (35), ನಡಿಮಪಲ್ಲಿ ಗ್ರಾಮದ ಸುರೇಂದ್ರ (36), ಅಮರನಾಥ್ (24) ಎಂಬವರನ್ನು ಬಂಧಿಸಲಾಗಿದೆ.

ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದ ವ್ಯಕ್ತಿಯ ಕೈಚೀಲದಲ್ಲಿ ಹಣ ಪತ್ತೆಯಾಗಿದೆ. ಚೀಲದಲ್ಲಿ 100 ರೂ. ಮೌಲ್ಯದ 800 ನೋಟುಗಳು, 500 ರೂ. ಮೌಲ್ಯದ 392 ನೋಟು, 2 ಸಾವಿರ ರೂ. ಮೌಲ್ಯದ 62 ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ.

ನಂಬರ್ ಪ್ಲೇಟ್ ಅಳವಡಿಸದ ಕಾರಿನಲ್ಲಿ ಹಣ ಸಾಗಿಸುತ್ತಿದ್ದು, ಹಣಕ್ಕೆ ಯಾವುದೇ ದಾಖಲೆ ಇಲ್ಲದಿರುವುದು ಪ್ರಕರಣಕ್ಕೆ ಮತ್ತಷ್ಟು ಅನುಮಾನ ಮೂಡಿಸಿದೆ. ಚೆಕ್‍ಪೋಸ್ಟ್ ನಲ್ಲಿ ಕಾರಿನ ತಪಾಸಣೆ ನಡೆಸಿದ ವೇಳೆ ಪ್ರಕರಣ ಬೆಳಕಿಗೆ ಬಂದಿದ್ದು, ಆಲೂಗೆಡ್ಡೆ ಮಾರಿದ ಹಣ ಎಂದು ಆರೋಪಿ ಸುರೇಂದ್ರ ಸಮಜಾಯಿಷಿ ನೀಡಿದ್ದಾನೆ.

ಮಾ.6ರಂದು ಆಲೂಗೆಡ್ಡೆ ಮಾರಿದ್ದಾಗಿ, ಕೇವಲ 1 ಲಕ್ಷ ರೂ.ಗಳಿಗೆ ಮಾತ್ರವೇ ಲೆಕ್ಕ ನೀಡಿದ್ದು, ಉಳಿದ 4.5 ಲಕ್ಷ ರೂ.ಹಣಕ್ಕೆ ಯಾವುದೇ ದಾಖಲೆ ನೀಡಿಲ್ಲ. ತಿಂಗಳ ಹಿಂದೆ ಆಲೂಗೆಡ್ಡೆ ಮಾರಿದ್ದರಿಂದ 1 ಲಕ್ಷ ಸೇರಿ, ಒಟ್ಟು 5.5 ಲಕ್ಷ ರೂ.ಗಳನ್ನು ಚುನಾವಣಾ ಆಯೋಗದ ಅಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಸಂಬಂಧ ನಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *