ನಲಪಾಡ್ ಬಳಿಕ ಮತ್ತೊಬ್ಬ ಕೈ ಶಾಸಕರ ಪುತ್ರನ ದರ್ಪ

ರಾಯಚೂರು: ನಲಪಾಡ್ ಪ್ರಕರಣ ಆಯ್ತು, ಇದೀಗ ರಾಯಚೂರಿನಲ್ಲಿ ಮತ್ತೊಬ್ಬ ಕಾಂಗ್ರೆಸ್ ಶಾಸಕರ ಪುತ್ರ ಯುವಕನೊಬ್ಬನ ಮೇಲೆ ಮನಬಂದಂತೆ ಹಲ್ಲೆ ಮಾಡಿ ದರ್ಪ ಮೆರೆದಿದ್ದಾನೆ.

ಮಸ್ಕಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಪ್ರತಾಪ್ ಗೌಡ ಪಾಟೀಲ್ ಎದುರಲ್ಲೆ ಅವರ ಪುತ್ರ ಪ್ರಸನ್ನ ಪಾಟೀಲ್ ಹಾಗೂ ಶಾಸಕರ ಪಿಎ ವೀರೇಶ್ ಯುವಕನೊಬ್ಬನನ್ನ ಥಳಿಸಿದ್ದಾರೆ.

ವೃದ್ಧರೊಬ್ಬರು ಶಾಸಕರಿಗೆ ಬೈದಿರುವ ವಿಡಿಯೋವನ್ನ ಆನಂದ್ ಎಂಬವನು ತನ್ನ ಸ್ನೇಹಿತರಿಗೆ ಹಾಗೂ ಇತರರಿಗೆ ಫಾರ್ವರ್ಡ್ ಮಾಡಿದ್ದ. ಇದರಿಂದ ಶಾಸಕರ ಸೂಚನೆ ಮೇರೆಗೆ ಕವಿತಾಳ ಠಾಣೆ ಪೊಲೀಸರು ಆನಂದನನ್ನ ವಶಕ್ಕೆ ಪಡೆದು ಲಾಠಿ ರುಚಿ ತೋರಿಸಿದ್ದಾರೆ. ಬಳಿಕ ಪೊಲೀಸರೇ ತಡರಾತ್ರಿಯಲ್ಲಿ ಶಾಸಕರ ಮನೆಗೆ ಆನಂದನನ್ನ ಕರೆದ್ಯೊಯ್ದಿದ್ದಾರೆ.

ವಿಡಿಯೋ ಫಾರ್ವರ್ಡ್ ಮಾಡಿದ್ದಕ್ಕೆ ಅವಾಚ್ಯವಾಗಿ ಬೈದು ಪ್ರಸನ್ನ ಪಾಟೀಲ್ ಹಾಗೂ ವೀರೇಶ್ ಮನಬಂದಂತೆ ಥಳಿಸಿದ್ದಾರೆ. ಒಂದು ಕಿವಿ ಕೇಳಿಸದಂತಾಗಿರುವ ಯುವಕ ಈಗ ಚೇತರಿಸಿಕೊಂಡಿದ್ದಾನೆ.

Comments

Leave a Reply

Your email address will not be published. Required fields are marked *