ಸಿಗರೇಟ್ ಗಾಗಿ 22 ವರ್ಷದ ತರುಣನನ್ನು ನಾಲ್ವರು, 6 ಬಾರಿ ಇರಿದು ಕೊಂದ್ರು!

ನವದೆಹಲಿ: ಸಿಗರೇಟ್ ಕೊಡಲಿಲ್ಲ ಎಂದು 22 ವರ್ಷದ ಯುವಕನನ್ನು ನಾಲ್ವರು ಸೇರಿ 6 ಬಾರಿ ಇರಿದು ಕೊಲೆ ಮಾಡಿರುವ ಘಟನೆ ನಗರದ ನೇತಾಜಿ ಸುಭಾಷ್ ಪ್ಲೇಸ್ ಸಿಗ್ನಲ್ ನಲ್ಲಿ ನಡೆದಿದೆ.

ಮೋಹಿತ್ ಕೊಲೆಯಾದ ದುರ್ದೈವಿ. ಈ ಘಟೆನೆ ಬುಧವಾರ ರಾತ್ರಿ ನಡೆದಿದೆ. ಮೋಹಿತ್ ಧೂಮಪಾನ ಮಾಡುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ನಾಲ್ವರಲ್ಲಿ ಓರ್ವ ಮೋಹಿತ್ ಬಳಿ ಸಿಗರೇಟ್ ಕೇಳಿದ್ದಾನೆ. ಆದರೆ ಮೋಹಿತ್ ಸಿಗರೇಟ್ ಕೊಡಲು ನಿರಾಕರಿಸಿದ್ದಾನೆ. ಇದರಿಂದ ಇಬ್ಬರ ಮಧ್ಯೆಯೂ ಮಾತಿಗೆ ಮಾತು ಬೆಳೆದಿದ್ದು, ಪರಿಣಾಮ ಮೋಹಿತ್ ಮೇಲೆ ಚಾಕುವಿನಿಂದ ಇರಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೋಹಿತ್ ಮೂಲತಃ ಹರಿಯಾಣದ ಜಿಂದ್ ನಿವಾಸಿಯಾಗಿದ್ದು, ಇಲ್ಲಿನ ಪಿತ್ರಂಪುರಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದನು. ಈತ ಖಾಸಗಿ ಇನ್ಸ್ ಸ್ಟಿಟ್ಯೂಟ್ ನಲ್ಲಿ ಕಂಪ್ಯೂಟರ್ ಡಿಸೈನಿಂಗ್ ಅಧ್ಯಯನ ಮಾಡುತ್ತಿದ್ದನು ಎಂದು ಪೊಲೀಸರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಆದರೆ ಇದುವರೆಗೂ ಯಾರನ್ನು ಬಂಧಿಸಿಲ್ಲ. ಎಂದು ಡಿಸಿಪಿ ಅಸ್ಲಾಮ್ ಖಾನ್ ಹೇಳಿದ್ದಾರೆ.

ಬುಧವಾರ ತಡರಾತ್ರಿ 1.15ರ ಸುಮಾರಿಗೆ ನನಗೆ ನೇತಾಜಿ ಸುಭಾಷ್ ಪ್ಲೇಸ್ ಸಿಗ್ನಲ್ ನಿಂದ ಒಬ್ಬ ವ್ಯಕ್ತಿಯನ್ನು ಒಡೆದು ಹಾಕಿದ್ದಾರೆ ಎಂದು ಪಿಸಿಆರ್ ಗೆ ಕರೆ ಬಂದಿತ್ತು. ನಂತರ ನಾವು ಸ್ಥಳಕ್ಕೆ ಧಾವಿಸಿದೆವು. ಅಷ್ಟರಲ್ಲಿ ಅವನ ಸ್ನೇಹಿತರು ಮತ್ತು ಇಬ್ಬರು ಸ್ಥಳೀಯರು ಸಮೀಪದ ಶಾಲಿಮಾರ್ ಬಾಗ್ ನಲ್ಲಿನ ಫೊರ್ಟೀಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ಅಷ್ಟರಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೋಹಿತ್ ಸಾವ್ನನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಘಟನೆ ಸಂಭವಿಸಿದಾಗ ಮೋಹಿತ್ ಮತ್ತು ಅವರ ಸ್ನೇಹಿತರಾದ ನಿತಿನ್, ರಾಬಿನ್ ಮತ್ತು ಲಲಿತ್ ಎನ್‍ಎಸ್‍ಪಿ ಮಾರುಕಟ್ಟೆಯಲ್ಲಿದ್ದರು. ರಾಬಿನ್ ಆಟೋರಿಕ್ಷಾವನ್ನು ಹುಡುಕುತ್ತಿದ್ದನು. ಈ ವೇಳೆ ಆರೋಪಿ ಮೋಹಿತ್ ಹತ್ತಿರ ಬಂದು ಸಿಗರೆಟ್ ಕೇಳಿದ್ದಾನೆ. ಆಗ ನಿರಾಕರಿಸಿದ್ದಕ್ಕೆ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಮೋಹಿತ್ ಗೆ ಮೂವರು ಆರೋಪಿಗಳು ಪದೇಪದೇ ಇರಿದಿದ್ದಾರೆ. ಈ ವೇಳೆ ಮೋಹಿತ್ ನ ಸ್ನೇಹಿತರು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಆರೋಪಿಗಳು ಅವರಿಗೂ ಕೂಡ ಬೆದರಿಕೆ ಹಾಕಿದ್ದಾರೆ. ಆಗ ಸಹಾಯಕ್ಕಾಗಿ ಕಿರುಚಿಕೊಂಡಾಗ ಸ್ಥಳೀಯರು ಹೋಗಿದ್ದು, ದಾರಿಯಲ್ಲಿ ಹೋಗುತ್ತಿದ್ದ ಕಾರನ್ನು ನಿಲ್ಲಿಸಿ ಆಸ್ಪತ್ರೆಗೆ ಕರೆದೊಯ್ದರು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *