7 ವರ್ಷದ ಬಾಲಕನ ಕನಸನ್ನು ನನಸು ಮಾಡಿದ ಮುಂಬೈ ಪೊಲೀಸ್ರು

ನವದೆಹಲಿ: ಕ್ಯಾನ್ಸರ್ ರೋಗಿಯಾದ ಏಳು ವರ್ಷದ ಬಾಲಕನ ಕನಸನ್ನು ಪೂರೈಸುವ ಮೂಲಕ ಮುಂಬೈ ಪೊಲೀಸರು ಮತ್ತೊಮ್ಮೆ ಜನರ ಹೃದಯಗಳನ್ನು ಗೆದ್ದಿದ್ದಾರೆ.

7 ವರ್ಷದ ಆರ್ಪಿತ್ ಮಂಡಲ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾನೆ. ಈತನಿಗೆ ಪೊಲೀಸ್ ಇನ್ಸ್ ಪೆಕ್ಟರ್ ಆಗಬೇಕೆಂಬ ಕನಸಿತ್ತು. ಆದ್ದರಿಂದ ಆರ್ಪಿತ್ ಮಂಡಲ್ ಗೆ ಒಂದು ದಿನದ ಮಟ್ಟಿಗೆ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯಾಗುವ ಅವಕಾಶವನ್ನು ಮುಂಬೈ ಪೊಲೀಸರು ಮಾಡಿಕೊಟ್ಟಿದ್ದರು.

ಮುಂಬೈ ಪೊಲೀಸ್ ತಂಡ ಬಾಲಕನ ಫೋಟೋವನ್ನು ಟ್ವೀಟ್ ಮಾಡಿದ್ದು, ಎಲ್ಲರೂ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಮಂಡಲ್ ಪೋಲಿಸ್ ಸಮವಸ್ತ್ರ ಧರಿಸಿಕೊಂಡು ಆಫೀಸ್ ಡೆಸ್ಕ್ ನಲ್ಲಿ ಕುಳಿತುಕೊಂಡಿದ್ದಾನೆ. ಇನ್ನಿತರೆ ಪೊಲೀಸ್ ಅಧಿಕಾರಿಗಳು ಆತನ ಪಕ್ಕ ನಿಂತಿದ್ದು, ಬಾಲಕನ ಕೈಯಿಂದ ಕೇಕ್ ಕತ್ತರಿಸುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದು.

ಮುಂಬೈ ಪೋಲಿಸರು ಬಾಲಕನ ಕನಸನ್ನು ನನಸು ಮಾಡಿ ಆತನಿಗೆ ಗೌರವ ಸಲ್ಲಿಸಿದ್ದಕ್ಕೆ ಬಾಲಕ ಸಂತಸದಿಂದ ಕಾಲ ಕಳೆದಿದ್ದಾನೆ. ಮುಂಬೈ ಪೊಲೀಸರು ಈ ರೀತಿಯ ಕಾರ್ಯ ಮಾಡಿರುವುದು ಇದೇ ಮೊದಲ ಬಾರಿ ಏನಲ್ಲ. ಈ ಹಿಂದೆ ಸಕಿನಕಾ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದ ಯುವಕನ ವಿವಿರಗಳನ್ನ ನೋಡಿದಾಗ ಅಂದು ಆತನ ಜನ್ಮದಿನ ಎಂದು ಗೊತ್ತಾಗಿ ಠಾಣೆಯಲ್ಲೇ ಆತನ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದರು.

Comments

Leave a Reply

Your email address will not be published. Required fields are marked *