ರಾತ್ರಿ ಕೇಳಿದಾಗ ಕಾಂಡೋಮ್ ಕೊಡಲಿಲ್ಲ ಎಂದು ಗಲಾಟೆ ಮಾಡಿದ ಸರ್ಕಾರಿ ನೌಕರ

ಚಿಕ್ಕಬಳ್ಳಾಪುರ: ಸರ್ಕಾರಿ ಆಸ್ಪತ್ರೆಗೆ ಬಂದ ಸರ್ಕಾರಿ ನೌಕರನೊಬ್ಬ ಆಸ್ಪತ್ರೆಯಲ್ಲಿದ್ದ ಶುಶ್ರೂಷಕಿ ಕಾಂಡೋಮ್ ಕೊಡಲಿಲ್ಲ ಅಂತ ಗಲಾಟೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೇರೇಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

ಬುಧವಾರ ತಡರಾತ್ರಿ ಕುಡಿದ ಅಮಲಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದ ಕೆಎಸ್‍ಆರ್ ಟಿಸಿ ಸಂಸ್ಥೆಯ ನೌಕರನೊಬ್ಬ ದಾದಿಯ ಬಳಿ ಕಾಂಡೋಮ್ ಕೇಳಿದನಂತೆ. ಆದರೆ ಕಾಂಡೋಮ್ ಬಾಕ್ಸ್ ನಲ್ಲಿದೆ ತೆಗೆದುಕೊಳ್ಳಿ ಅಂತ ಹೇಳಿದ ದಾದಿಯ ಮೇಲೆ ಕ್ಯಾತೆ ತೆಗೆದ ಸರ್ಕಾರಿ ನೌಕರ ಕುಡಿದ ಅಮಲಿನಲ್ಲಿ ಜಗಳ ಮಾಡಿದ್ದಾನೆ.

ಈ ವೇಳೆ ದಾದಿ ತನ್ನ ಪತಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಬಂದ ಗಂಡ ಸರ್ಕಾರಿ ನೌಕರನಿಗೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ನಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಆರೋಪಿತ ಸರ್ಕಾರಿ ನೌಕರ ಎಂಬ ಕಾರಣಕ್ಕೆ ರಾಜೀ ಪಂಚಾಯತಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಜಿಲ್ಲಾ ಆರೋಗ್ಯಾಧಿಕಾರಿ ರವಿಶಂಕರ್, ಘಟನೆ ನಡೆದಿರುವುದು ಧೃಡವಾಗಿದ್ದು, ಕಳ್ಳತನ ಮಾಡಲು ಆರೋಪಿ ಆಸ್ಪತ್ರೆಗೆ ಬಂದಿದ್ದ ಅಂತ ದೂರು ನೀಡಲಾಗಿದೆ. ಪೊಲೀಸರು ಮುಂದಿನ ತನಿಖೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಈ ಘಟನೆಗೆ ಸಂಬಂಧಪಟ್ಟ ವರದಿ ನೀಡಲು ಸ್ಥಳೀಯ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ. ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Comments

Leave a Reply

Your email address will not be published. Required fields are marked *