ವಿಡಿಯೋ: ಚಾಕು ಹಿಡಿದು ಚೆಫ್ ಗೆ ಚಮಕ್ ಕೊಟ್ಟ ಏಡಿ!

ಕೌಲಾಲಂಪುರ್: ಬಾಣಸಿಗನ ಜೊತೆ ಅಡುಗೆಮನೆಯಲ್ಲಿ ಏಡಿಯೊಂದು ಚಾಕು ಹಿಡಿದು ಕಾಳಗ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಏಡಿ ತನ್ನ ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಬಾಣಸಿಗನ ಜೊತೆ ಹೋರಾಡಲು ಚಾಕು ಹಿಡಿದಿರೋದನ್ನ ಕಾಣಬಹುದು. ಏಡಿ ಕೆಚ್ಚೆದೆಯಿಂದ ತನ್ನ ಬಲ ಮತ್ತು ಎಡ ಉಗುರುಗಳ ನಡುವೆ ಆ ಕಡೆಯಿಂದ ಈಕಡೆಗೆ ಚಾಕುವನ್ನ ಬದಲಾಯಿಸುತ್ತದೆ.

ಏಡಿ ಅಡುಗೆಮನೆ ತೊಟ್ಟಿಯ ಮೂಲೆಯಲ್ಲಿದ್ದು, ಶಸ್ತ್ರಾಸ್ತ್ರವನ್ನು ಹಿಡಿದು ತನ್ನ ರಕ್ಷಣೆಯನ್ನು ಮಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಾಣಸಿಗ ಇನ್ನೊಂದು ಚಾಕು ಹಿಡಿದು ಅದಕ್ಕೆ ತಿವಿದರೂ ಏಡಿ ಹೋರಾಡುತ್ತದೆ. ಆದರೆ ಸ್ವಲ್ಪ ಸಮಯದ ನಂತರ ಏಡಿ ಶರಣಾಗತಿಯಾಗುವಂತೆ ಕೈಚೆಲ್ಲುತ್ತದೆ.

ಈ ವಿಡಿಯೋ ಕಳೆದ ವಾರ ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದು, ಈಗಾಗಲೇ ಸುಮಾರು 2 ಲಕ್ಷ ಕ್ಕೂ ಹೆಚ್ಚಿನ ವೀವ್ಸ್ ಕಂಡಿದೆ. ಕೊನೆಗೆ ಏಡಿಯ ಗತಿ ಏನಾಯಿತು ಎಂಬ ಬಗ್ಗೆ ವರದಿಯಗಿಲ್ಲ.

https://www.youtube.com/watch?v=r7cO0Nl5zBQ

Comments

Leave a Reply

Your email address will not be published. Required fields are marked *