ಶ್ರೀದೇವಿ ಅಂತ್ಯಸಂಸ್ಕಾರಕ್ಕೆ ಸರ್ಕಾರಿ ಗೌರವ ಸಲ್ಲಿಸಿದಕ್ಕೆ ರಾಜ್ ಠಾಕ್ರೆ ಆಕ್ರೋಶ

ಮುಂಬೈ: ಬಾಲಿವುಡ್ ಅತಿಲೋಕದ ಸುಂದರಿ, ಚಾಂದಿನಿ ನಟಿ ಶ್ರೀದೇವಿ ಅಂತ್ಯಸಂಸ್ಕಾರಕ್ಕೆ ಸರ್ಕಾರಿ ಗೌರವ ಸಲ್ಲಿಸಿದಕ್ಕೆ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್ ಠಾಕ್ರೆ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಶ್ರೀದೇವಿ ಮದ್ಯಪಾನ ಸೇವಿಸಿದ್ದರಿಂದ ಸಾವನ್ನಪ್ಪಿದ್ದಾರೆ ಅಂತಾ ಹೇಳಲಾಗಿದೆ. ಅತಿಯಾದ ಮದ್ಯ ಸೇವಿಸಿ ಸಾವನ್ನಪ್ಪಿದವರ ಮೃತದೇಹಕ್ಕೆ ತ್ರಿವರ್ಣ ಧ್ವಜ ಹೊದಿಸಿ, ಸರ್ಕಾರಿ ಗೌರವ ಸಲ್ಲಿಸಿವುದು ಎಷ್ಟು ಸರಿ ಅಂತಾ ರಾಜ್ ಠಾಕ್ರೆ ಪ್ರಶ್ನೆ ಮಾಡಿದ್ದಾರೆ.

ಮದ್ಯಪಾನ ಸೇವನೆ ಮಾಡಿ ಸತ್ತವರಿಗೆ ತ್ರಿವರ್ಣ ಧ್ವಜ ಹೊದಿಸಿ ಗೌರವ ನೀಡುತ್ತಾರೆ. ಆದ್ರೆ ನನಗೆ ಒಂದು ವಿಷಯ ಮಾತ್ರ ಇದೂವರೆಗೂ ಗೊತ್ತಾಗಿಲ್ಲ, ಶ್ರೀದೇವಿ ಸರ್ಕಾರಿ ಗೌರವಕ್ಕೆ ಪಾತ್ರರಾಗುವಂತಹ ಯಾವ ಕೆಲಸ ಮಾಡಿದ್ದಾರೆ. ಬಹುಶಃ ಸರ್ಕಾರ ಶ್ರೀದೇವಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ್ದರಿಂದ ಸರ್ಕಾರಿ ಗೌರವ ಸಲ್ಲಿಸಿರಬಹುದು. ನಶೆಯಲ್ಲಿ ಬಾತ್ ಟಬ್ ನಲ್ಲಿ ಜಾರಿ ಬಿದ್ದು ಶ್ರೀದೇವಿ ಸಾವು ಸಂಭವಿಸಿದೆ. ಆದ್ರೂ ಸರ್ಕಾರಿ ಗೌರವ ಸಲ್ಲಿಸುವ ಮೂಲಕ ಮಹಾರಾಷ್ಟ್ರ ಸರ್ಕಾರ ತಪ್ಪು ಮಾಡಿದೆ ಅಂತಾ ಅಸಮಾಧಾನವನ್ನು ಹೊರಹಾಕಿದ್ರು.

ಎಲ್ಲ ಮಾಧ್ಯಮಗಳು ಸತತವಾಗಿ ಶ್ರೀದೇವಿ ಅವರ ಸುದ್ದಿಯನ್ನೇ ನಿರಂತರವಾಗಿ ಪ್ರಸಾರ ಮಾಡಿ, ನೀರವ್ ಮೋದಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡಲಾಗಿತ್ತು. ಕೇವಲ ಶ್ರೀದೇವಿ ಸುದ್ದಿಯನ್ನು ಬಿತ್ತರಿಸುತ್ತ ಜನರ ಗಮನವನ್ನು ನೀರವ್ ಮೋದಿ ಪ್ರಕರಣದಿಂದ ಮರೆಮಾಡಲಾಗಿತ್ತು ಅಂತಾ ಆರೋಪಿಸಿದರು.

Comments

Leave a Reply

Your email address will not be published. Required fields are marked *