ನಾಗವಲ್ಲಿ ವರ್ಸಸ್ ಆಪ್ತಮಿತ್ರರು-2: ಚಿತ್ರದ ನಾಯಕನ ಹಲ್ಲೆ ಪ್ರಕರಣಕ್ಕೆ ತಿರುವು

ಬೆಂಗಳೂರು: ಇಂದು ಬೆಳಗ್ಗೆ ನನ್ನ ಮೇಲೆ ಹಲ್ಲೆಯಾಗಿದೆ ಅಂತಾ ನಾಗವಲ್ಲಿ ವರ್ಸಸ್ ಆಪ್ತಮಿತ್ರ-2 ಚಿತ್ರದ ನಾಯಕ ಕಾರ್ತಿಕ್ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಚಿತ್ರದ ಪ್ರಚಾರಕ್ಕಾಗಿ ಈ ರೀತಿಯ ಡ್ರಾಮಾ ಮಾಡಲಾಗಿತ್ತು ಎಂಬ ಮಾಹಿತಿಗಳು ಲಭಿಸಿವೆ.

ಸುಮಾರು 8 ಜನರ ಗ್ಯಾಂಗ್ ಹಲ್ಲೆ ಮಾಡಿದ್ದು, ಸ್ವಿಫ್ಟ್ ಕಾರು, 50 ಸಾವಿರ ರೂ. ನಗದು ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಹೇಳಿ ಕಾರ್ತಿಕ್ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಕರಣದಲ್ಲಿ ಸಾಕಷ್ಟು ಅನುಮಾನಗಳಿರೋದ್ರಿಂದ ಪೊಲೀಸರು ತನಿಖೆ ನಡೆಸಿದ್ದರು. ತನಿಖೆ ವೇಳೆಯಲ್ಲಿ ನಟ ತನ್ನ ನಾಗವಲ್ಲಿ ವರ್ಸಸ್ ಆಪ್ತಮಿತ್ರರು ಚಿತ್ರದ ಪ್ರಚಾರಕ್ಕಾಗಿ ಈ ರೀತಿಯ ಗಿಮಿಕ್ ಮಾಡಿದ್ದ ವಿಚಾರ ಬೆಳಕಿಗೆ ಬಂದಿದೆ.

ಹಾಗಾದ್ರೆ ರಾತ್ರಿ ಆಗಿದ್ದೇನು?: ಮಂಗಳವಾರ ರಾತ್ರಿ ನಟ ಕಾರ್ತಿಕ್ ವಿಕ್ರಂ ಕುಡಿದು ಕಾರ್ ಓಡಿಸುತ್ತಿದ್ದು, ನಗರದ ಶಂಕರಮಠ ಸಿಗ್ನಲ್ ಬಳಿ ತನ್ನ ಸ್ವಿಫ್ಟ್ ಕಾರ್ ನಿಂದ ಮತ್ತೊಂದು ಕಾರ್ ಗೆ ಡಿಕ್ಕಿ ಹೊಡೆಸಿದ್ದಾರೆ. ಈ ವೇಳೆ ಕುಡಿದು ಅಪಘಾತ ಮಾಡಿದ್ದೀಯಾ ಸ್ಥಳೀಯ ಯುವಕರು ನಟನನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ವೇಳೆ ನಮ್ಮ ಕಾರ್ ಜಖಂ ಆಗಿದ್ದು, ರಿಪೇರಿಗಾಗಿ 50 ಸಾವಿರ ರೂ. ಖರ್ಚಾಗುತ್ತೆ ಕೊಟ್ಟು ಹೋಗು ಅಂದಿದ್ದರು. ಹಣ ನೀಡದ ಕಾರ್ತಿಕ್ ವಿಕ್ರಂ ನನ್ನ ಬಳಿ ದುಡ್ಡಿಲ್ಲ ಬೇಕಾದರೆ ನನ್ನ ಕಾರ್ ನೀವೇ ಇಟ್ಕೊಳ್ಳಿ, ನಾಳೆ ಬಿಡಿಸಿಕೊಂಡು ಹೋಗ್ತಿನಿ ಅಂತೇಳಿ ಹೋಗಿದ್ದರು.

ಬೆಳಗ್ಗೆಯಾದ ಕೂಡಲೇ ಕಾರ್ತಿಕ್ ವಿಕ್ರಂ ಕಾರು, ಹಣ, ಮೊಬೈಲ್ ಕಿತ್ಕೊಂಡ್ರು ಅಂತಾ ಆರೋಪಿಸಿ ಬಸವೇಶ್ವರ ನಗರದ ಪುಣ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಸ್ಥಳೀಯ ಯುವಕರು ವಶಪಡಿಸಿಕೊಂಡಿದ್ದ ನಟನ ಕಾರನ್ನು ಠಾಣೆಗೆ ತರುವಂತೆ ಪೊಲೀಸರು ಸೂಚಿಸಿದ್ದಾರೆ.

Comments

Leave a Reply

Your email address will not be published. Required fields are marked *