ಚುನಾವಣೆ ವೇಳೆ ಮಂಡ್ಯಕ್ಕೆ ಬರುತ್ತೇನೆ ಅನ್ನೋ ಟೀಕೆಗೆ ಬಹಿರಂಗವಾಗಿ ಸ್ಪಷ್ಟನೆ ಕೊಟ್ಟ ಅಂಬಿ

ಮಂಡ್ಯ: ಶಾಸಕ ಅಂಬರೀಷ್ ಚುನಾವಣೆ ಸಮಯದಲ್ಲಿ ಮಂಡ್ಯಕ್ಕೆ ಬರುತ್ತಿದ್ದಾರೆ ಎಂಬ ಟೀಕೆಗೆ ಬಹಿರಂಗ ಸಭೆಯಲ್ಲೇ ಅಂಬರೀಷ್ ಸ್ಪಷ್ಟನೆ ನೀಡಿದ್ದಾರೆ.

ಅಂಬೇಡ್ಕರ್ ಭವನ ಸೇರಿದಂತೆ ವಿವಿಧ ಕಟ್ಟಡಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು, ನನ್ನ ಆರೋಗ್ಯದ ಬಗ್ಗೆ ನಿಮಗೆ ಗೊತ್ತೇ ಇದೆ. ಮುಖ್ಯಮಂತ್ರಿಗಳು ಮಂಡ್ಯಕ್ಕೆ ಬಂದು ಉದ್ಘಾಟನೆ ಮಾಡಿದ ದೊಡ್ಡ ಕಾರ್ಯಕ್ರಮಗಳಿಗೂ ನಾನು ಬರಲಾಗಲಿಲ್ಲ. ಅದಕ್ಕೆ ಕಾರಣ ನನ್ನ ಆರೋಗ್ಯ ಎಂಬುದು ನಿಮಗೂ ಗೊತ್ತೇ ಇದೆ. ನಿಮ್ಮ ಆಶೀರ್ವಾದದಿಂದ ಆರೋಗ್ಯ ಸುಧಾರಿಸಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಬಂದಿದ್ದೇನೆ. ಕೇವಲ ಚುನಾವಣೆಗಾಗಿ ಅಂಬರೀಷ್ ಬರುವವನಲ್ಲ ಎಂದು ಸಾರ್ವಜನಿಕ ಸಭೆಯಲ್ಲಿ ಮಂಡ್ಯ ಜನರಿಗೆ ಅಂಬರೀಷ್ ಸ್ಪಷ್ಟನೆ ನೀಡಿದ್ರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಬರದೇ ಇದ್ದುದ್ದರ ಬಗ್ಗೆಯೂ ಜನ ಚರ್ಚೆಯಲ್ಲಿ ತೊಡಗಿದ್ರು. ಅಂಬಿ ಮತ್ತು ಸಿಎಂ ನಡುವೆ ಇನ್ನೂ ಮುನಿಸು ಹೋಗಿಲ್ಲ. ಹೀಗಾಗಿ ಮಂಡ್ಯದಲ್ಲಿ ಒಬ್ಬರು ಬರುವ ಕಾರ್ಯಕ್ರಮಕ್ಕೆ ಮತ್ತೊಬ್ಬರು ಬರಲ್ಲ ಎಂದು ಜನರು ತಮ್ಮಷ್ಟಕ್ಕೆ ತಾವು ಮಾತನಾಡಿಕೊಳ್ಳುತ್ತಿದಿದ್ದು ಸಾಮಾನ್ಯವಾಗಿತ್ತು.

ಇದೇ ವೇಳೆ ಅಂಬರೀಷ್ ವೇದಿಕೆ ಮೇಲೆ ಸಹಜವಾಗಿ ಮಾತನಾಡಿದ ಮಾತೊಂದು ಡಬ್ಬಲ್ ಮೀನಿಂಗ್ ಸ್ವರೂಪ ಪಡೆದುಕೊಂಡು ವೇದಿಕೆ ಮೇಲಿದ್ದವರು ಸೇರಿದಂತೆ, ಸಾರ್ವಜನಿಕರು ನಗೆಗಡಲಲ್ಲಿ ತೇಲುವಂತೆ ಮಾಡಿತು.

Comments

Leave a Reply

Your email address will not be published. Required fields are marked *