ನಿರ್ಭಯಾ ತಾಯಿ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಸಾಂಗ್ಲಿಯಾನ

ಬೆಂಗಳೂರು: ನಿರ್ಭಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡುವ ಭರದಲ್ಲಿ ತಾಯಿ ದೇಹವನ್ನ ಉದಾಹರಣೆ ನೀಡಿ ನಿವೃತ್ತ ಪೊಲೀಸ್ ಅಧಿಕಾರಿ ಸಾಂಗ್ಲಿಯಾನರ ಹೇಳಿಕೆ ಇದೀಗ ವಿವಾದ ಎಬ್ಬಿಸಿದೆ.

ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ ನಿರ್ಭಯ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಂಗ್ಲಿಯಾನ, ನಿರ್ಭಯಾ ತಾಯಿಯ ಫಿಸಿಕ್ ನೋಡಿದ್ರೇ ನಿರ್ಭಯ ಸೌಂದರ್ಯ ಹೇಗಿರಬಹುದು ಅನ್ನೋದು ನನ್ನ ಕಣ್ಣ ಮುಂದೆ ಬಂತು ಅನ್ನೊ ಹೇಳಿಕೆ ನೀಡುವ ಮೂಲಕ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ವೇದಿಕೆ ಮೇಲೆ ಈ ಪದ ಬಳಕೆ ಮಾಡಿದಾಗಲೇ ಕಾರ್ಯಕ್ರಮದಲ್ಲಿ ವಿರೋದ ವ್ಯಕ್ತವಾಗಿದೆ. ನಿರ್ಭಯಾ ಪ್ರಶಸ್ತಿ ಸ್ವೀಕರಿಸಲು ಬಂದ ಹಲವು ಮಹಿಳೆಯರು ಪ್ರಶಸ್ತಿಯನ್ನ ಸ್ವೀಕರಿಸದೇ ಹೊರ ನಡೆದಿದ್ರು. ನಿರ್ಭಯಾ ಪ್ರಕರಣ ಇಡೀ ಭಾರತ ಮಾತ್ರವಲ್ಲ ವಿಶ್ವದಲ್ಲೇ ಹೆಣ್ಣಿನ ರಕ್ಷಣೆಯ ಬಗ್ಗೆ ಪ್ರಶ್ನೆ ಎತ್ತಿತ್ತು. ವೇದಿಕೆ ಮೇಲೆ ನಿರ್ಭಯಾ ತಾಯಿ ಇದ್ದಾಗಲೇ ಸಾಂಗ್ಲಿಯಾನ ಈ ರೀತಿ ಮಾತನಾಡಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ನಿರ್ಭಯಾ ಪ್ರಕರಣ ನಡೆದು ಹಲವು ವರ್ಷಗಳಾಗಿದ್ರೂ, ಅದೇ ಹೆಸರಿನಲ್ಲಿ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರಿಗೆ ಪ್ರಶಸ್ತಿ ಪ್ರಧಾನ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೊಲೀಸ್ ಇಲಾಖೆಯ ಡಿಐಜಿ ರೂಪ ಸೇರಿ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರು ಸಹ ಭಾಗವಹಿಸಿದ್ರು. ಇತ್ತ ಸಾಂಗ್ಲಿಯಾನಾರ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಯುಟಿಸಿ ಮತ್ತು ಇಂಡಿಯನ್ ಎಕನಾಮಿಕ್ ಟ್ರೇಡ್ ಆರ್ಗನೈಸೇಶನ್ ಅನ್ನೊ ಎನ್ ಜಿಒ ಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ನಡೆದಿತ್ತು.

Comments

Leave a Reply

Your email address will not be published. Required fields are marked *