ಜಿಮ್ ಹೊರಗೆ ನಿಂತಿದ್ದ ಕತ್ರಿನಾ ಕಾರನ್ನು ನೋಡಿ ವಾಪಸ್ ಹೋದ ದೀಪಿಕಾ!

ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ವರ್ಕೌಟ್ ಮಾಡಲೆಂದು ಜಿಮ್‍ಗೆ ಹೋಗಿದ್ದ ವೇಳೆ ಹೊರಗೆ ನಿಂತಿದ್ದ ಕತ್ರಿನಾ ಕೈಫ್ ಕಾರನ್ನು ನೋಡಿ ಅಲ್ಲಿಂದ ಯು-ಟರ್ನ್ ತೆಗೆದುಕೊಂಡು ವಾಪಸ್ ಬಂದಿದ್ದಾರೆ.

ದೀಪಿಕಾ ಪಡುಕೋಣೆ ಬೆನ್ನು ನೋವಿನಿಂದ ಬಳಲುತ್ತಿದ್ದು, ಜಿಮ್‍ನ ತರಬೇತಿ ಪಡೆಯಲು ಸೆಲಬ್ರಿಟಿ ಟ್ರೈನರ್ ಯಾಸ್ಮಿನ್ ಕರ್ಚಿವಾಲಾ ಅವರ ಫಿಟ್ನೆಸ್ ಕ್ಲಾಸ್‍ಗೆ ಹೋಗಿದ್ದಾರೆ. ಜಿಮ್ ಹತ್ತಿರ ಹೋಗುತ್ತಿದ್ದಂತೆ ಅಲ್ಲಿ ಕತ್ರಿನಾ ಕೈಫ್ ಅವರ ಕಾರನ್ನು ನೋಡಿ ಅಲ್ಲಿಂದ ಯು-ಟರ್ನ್ ತೆಗೆದುಕೊಂಡಿದ್ದಾರೆ.

 

ದೀಪಿಕಾ ಹಾಗೂ ಕತ್ರಿನಾ ಇಬ್ಬರೂ ರಣ್‍ಬೀರ್ ಕಪೂರ್ ನ ಮಾಜಿ ಪ್ರೇಯಸಿಯಾಗಿದ್ದು, ಇಬ್ಬರು ಎದುರು-ಬದರು ಬರಲು ಇಷ್ಟಪಡುವುದಿಲ್ಲ. ದೀಪಿಕಾಗೆ ಕತ್ರಿನಾ ಕಾರ್ ನಂಬರ್ ತಿಳಿದಿದ್ದು, ಆ ಕಾರನ್ನು ಜಿಮ್ ಹೊರಗಡೆ ನೋಡುತ್ತಿದ್ದಂತೆ ಕತ್ರಿನಾ ಮುಂದೆ ಬರಲು ಬಯಸದೇ ಅಲ್ಲಿಂದ ಹೊರಟು ಹೋಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಈ ಹಿಂದೆ ದೀಪಿಕಾ ತಮ್ಮ ತಂಗಿ ಅನಿಷಾರೊಂದಿಗೆ ಖಾಸಗಿ ಕಾರ್ಯಕ್ರಮದ ಚಾಟ್ ಶೋನಲ್ಲಿ ಭಾಗವಹಿಸಿದ್ದು, ಕಾರ್ಯಕ್ರಮದ ನಿರೂಪಕಿಯಾದ ನಟಿ ನೇಹಾ ದೂಪಿಯಾ ನಿಮ್ಮ ಮದುವೆಗೆ ಯಾರಿಗೆ ಆಹ್ವಾನ ನೀಡುವುದಿಲ್ಲ ಎಂದು ದೀಪಿಕಾ ಅವರಲ್ಲಿ ಪ್ರಶ್ನಿಸಿದ್ದರು. ಅದಕ್ಕೆ ಗುಳಿ ಕೆನ್ನೆಯ ಸುಂದರಿ ಕತ್ರಿನಾ ಕೈಫ್ ಗೆ ಆಹ್ವಾನ ನೀಡುವುದಿಲ್ಲ ಖಡಕ್ ಆಗಿ ಉತ್ತರಿಸಿದ್ದರು.

ದೀಪಿಕಾ ಬಾಲಿವುಡ್‍ಗೆ ಎಂಟ್ರಿಯಾದ ಬಳಿಕ ರಣ್ ಬಿರ್ ಕಪೂರ್ ಜೊತೆ ಪ್ರೇಮ ಸಂಬಂಧ ಹೊಂದಿದ್ದರು. ಈ ಪ್ರೇಮ ಸಂಬಂಧ ಬ್ರೇಕಪ್ ಆಗಲು ಕ್ರತಿನಾ ಕಾರಣ ಎನ್ನುವ ಸುದ್ದಿ ಬಾಲಿವುಡ್ ವಲಯದಲ್ಲಿ ಹರಿದಾಡುತಿತ್ತು. ಈ ಕಾರಣಕ್ಕೆ ದೀಪಿಕಾ ಕತ್ರಿನಾಗೆ ಮದುವೆ ಆಹ್ವಾನ ನೀಡುತ್ತಿಲ್ಲ ಎನ್ನುವ ಮಾತು ಈಗ ಕೇಳಿ ಬರುತ್ತಿದೆ. ಇದನ್ನೂ ಓದಿ:  ಈಗ ಅಧಿಕೃತ: ಕೊನೆಗೂ ನಿಗದಿಯಾಯ್ತು ರಣ್‍ವೀರ್-ದೀಪಿಕಾ ಮದುವೆ!

Comments

Leave a Reply

Your email address will not be published. Required fields are marked *