ಸಿಎಂ ಜೊತೆ ಖೇಣಿ ನೈಸ್ ಡೀಲಿಂಗ್ ಮಾಡಿದ್ದಾರೆ- ಜಗದೀಶ್ ಶೆಟ್ಟರ್

ಉಡುಪಿ: ಖೇಣಿ ಜೊತೆ ಸಿದ್ದರಾಮಯ್ಯ `ನೈಸ್ ಡೀಲಿಂಗ್’ ಆಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪ ಮಾಡಿದ್ದಾರೆ.

ಜಿಲ್ಲೆಯ ಕಾಪುವಿನಲ್ಲಿ ನಡೆದ ಜನ ಸುರಕ್ಷಾ ಸಮಾವೇಶದಲ್ಲಿ ಶೆಟ್ಟರ್ ಮಾತನಾಡಿದ ಅವರು, ಬೆಳಗ್ಗಿನಿಂದ ಸಾಯಂಕಾಲದವರೆಗೆ ಖೇಣಿ ಬಗ್ಗೆ ಟೀಕೆ ಮಾಡಿದ್ರು. ವಿರೋಧ ಪಕ್ಷ ನಾಯಕರಾಗಿದ್ದಾಗ ಅತೀಹೆಚ್ಚು ಟೀಕೆ ಮಾಡಿದ್ದು ಇದೇ ಸಿದ್ದರಾಮಯ್ಯ. ಈಗ ಅಶೋಕ್ ಖೇಣಿನ ಕಾಂಗ್ರೆಸ್ ಪಾರ್ಟಿಗೆ ತಗೋತಾರೆ ಅಂದ್ರು.

ಸೋಮವಾರ ಸಿದ್ದರಾಮಯ್ಯ ಜೊತೆ ನೈಸ್ ಡೀಲಿಂಗ್ ಆಗಿರೋದೇ ಅದಕ್ಕೆ ಕಾರಣ. ಪರಮೇಶ್ವರ್ ಅವರು ಖೇಣಿನ ಮಾತ್ರ ತಗೊಂಡಿದ್ದೇವೆ. ನೈಸ್ ಕಂಪೆನಿನ ತಗೊಂಡಿಲ್ಲ ಅಂತಾರೆ. ಹಾಗಾದ್ರೆ ಖೇಣಿ ನೈಸ್ ಕಂಪೆನಿಗೆ ರಾಜೀನಾಮೆ ಕೊಟ್ಟಿದ್ದಾರಾ ಎಂದು ಶೆಟ್ಟರ್ ಪ್ರಶ್ನಿಸಿದರು.

ಪ್ರಧಾನಿ ನರೇಂದ್ರ ಮೋದಿಗೆ ಟೀಕೆ ಮಾಡದೇ ಇದ್ರೆ ಸಿದ್ದರಾಮಯ್ಯಗೆ ರಾತ್ರಿ ನಿದ್ರೆ ಬರಲ್ಲ. ಮೋದಿ ಟೀಕೆ ಮಾಡಿದಷ್ಟೂ ಕಾಂಗ್ರೆಸ್ ಗೆ ಹಾನಿಯಾಗುತ್ತೆ. ರಾಹುಲ್ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಗಂಟು ಮೂಟೆ ಕಟ್ಟುತ್ತೆ. ರಾಹುಲ್ ಬಂದಲ್ಲಿ ಕಾಂಗ್ರೆಸ್ ಖತಂ. ರಾಹುಲ್ ಉಡುಪಿಗೂ ಬರ್ತಾರಂತೆ. ಕೃಷ್ಣಮಠಕ್ಕೂ ಹೋಗ್ತಾರಂತೆ. ಈಗ ಇವರಿಗೆ ಹಿಂದೂಗಳ ನೆನಪಾಗ್ತಿದೆಯಾ? ರಾಹುಲ್ ಉಡುಪಿಗೆ ಬಂದಾಗ ಸಿದ್ದರಾಮಯ್ಯ ಕೃಷ್ಣಗುಡಿಗೆ ಬರ್ತಾರಾ? ಸಿಎಂ ಈ ಬಗ್ಗೆ ಸ್ಪಷ್ಟನೆ ಕೊಡಬೇಕು. ಈವರೆಗೆ ಕೃಷ್ಣಮಠಕ್ಕೆ ಹೋಗಿಲ್ಲ ಉತ್ತರ ಕೊಡಿ ಎಂದು ಜಗದೀಶ್ ಶೆಟ್ಟರ್ ಒತ್ತಾಯಿಸಿದ್ರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಕೆಟ್ಟ ನಡವಳಿಕೆಯ, ಅಹಂಕಾರಿ, ದುರಹಂಕಾರಿ ಮುಖ್ಯಮಂತ್ರಿ ಇದ್ರೆ ಅದು ಸಿದ್ದರಾಮಯ್ಯ. ಇದರಲ್ಲೆಲ್ಲಾ ಸಿಎಂ ನಂ 1. ಹೀಗಾಗಿ ರಾಜ್ಯಾದ್ಯಂತ ನಂ.1 ಬೋರ್ಡ್ ಹಾಕಿಸಿದ್ದಾರೆ ಎಂದರು.

ಕಾಂಗ್ರೆಸ್ ಗೆ ಈಗ ಗುಡಿ ಗುಂಡಾರ ನೆನಪಾಗಿದೆ. ಹಿಂದೂಗಳಿಗೆ ರಕ್ಷಣೆ ನೀಡೋದು ಸಿದ್ದರಾಮಯ್ಯರಿಗೆ ಸಾಧ್ಯವಾಗಿಲ್ಲ. ಇಡೀ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಐದಾರು ಬಾರಿ ಬಂದವರು ಕೃಷ್ಣಮಠಕ್ಕೆ ಬಂದಿಲ್ಲ. ರಾಹುಲ್ ಬಂದರೆ ಬರ್ತಾರಾ ಅಂತ ಪ್ರಶ್ನಿಸಿದ್ರು.

 

Comments

Leave a Reply

Your email address will not be published. Required fields are marked *