ಲಿಂಗಾಯತ ಪ್ರತ್ಯೇಕ ಧರ್ಮ, ಅದಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಕೊಡ್ಬೇಕು- ನಿವೃತ್ತ ನ್ಯಾ. ನಾಗಮೋಹನ್‍ದಾಸ್ ಸಮಿತಿ ಶಿಫಾರಸು

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೆ ಸ್ಫೋಟಕ ಟ್ವಿಸ್ಟ್ ಸಿಕ್ಕಿದೆ. ಲಿಂಗಾಯಿತ ಧರ್ಮ ಹಿಂದೂ ಧರ್ಮ ಅಲ್ಲ, ವೀರಶೈವ ಧರ್ಮವೂ ಅಲ್ಲ. ಲಿಂಗಾಯಿತ ಧರ್ಮ ಒಂದು ಪ್ರತ್ಯೇಕ ಧರ್ಮ ಅಂತ ನಿವೃತ್ತ ನ್ಯಾ.ನಾಗಮೋಹನ್ ದಾಸ್ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ವೀರಶೈವ ಮತ್ತು ಲಿಂಗಾಯತ ಪ್ರತ್ಯೇಕ ಧರ್ಮ ಕುರಿತಂತೆ ವಿವಿಧ ಸಂಘಟನೆಗಳ ಅಹವಾಲು ಆಧರಿಸಿ, ಶಿಫಾರಸಲು ಮಾಡಲು ಈ ಸಮಿತಿಯನ್ನು ರಚಿಸಲಾಗಿತ್ತು. ಶುಕ್ರವಾರ ಸಂಜೆ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಜೀರ್ ಅಹ್ದದ್‍ರನ್ನು ಭೇಟಿಯಾಗಿ ವರದಿ ಸಲ್ಲಿಸಿರುವ ಸಮಿತಿ, ಲಿಂಗಾಯಿತ ಧರ್ಮಕ್ಕೆ ಅಲ್ಪಸಂಖ್ಯಾತರ ಮಾನ್ಯತೆ ನೀಡಬೇಕೆಂದು ಹೇಳಿದೆ.

ಇದರ ಜೊತೆಗೆ ಭಾರತದಲ್ಲಿ ಹುಟ್ಟಿದ ಜೈನ, ಸಿಖ್ ಧರ್ಮದಂತೆ ಲಿಂಗಾಯತವೂ ಒಂದು ಸ್ವತಂತ್ರ ಧರ್ಮ. ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಘೋಷಿಸಲು ಕೇಂದ್ರಕ್ಕೆ ಶಿಫಾರಸು ಮಾಡಬಹುದು ಅಂತ ಹೇಳಿದೆ.

ವೀರಶೈವ-ಲಿಂಗಾಯತರ ಬೇಡಿಕೆ ಪರಿಶೀಲಿಸಲು 2017ರ ಡಿಸೆಂಬರ್ 22ರಂದು ತಜ್ಞರ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿತ್ತು. ಸಮಿತಿ ರಚನೆಯಾದ ಎರಡು ತಿಂಗಳ ಬಳಿಕ ತಜ್ಞರ ತಂಡ ವರದಿ ಸಲ್ಲಿಸಿದೆ.

ಶಿಫಾರಸ್ಸಿನಲ್ಲಿರುವ ಅಂಶಗಳೇನು?
– ಬಸವಣ್ಣ ಸ್ಥಾಪಿಸಿದ ಲಿಂಗಾಯತ ಧರ್ಮ ಹಿಂದೂ ಧರ್ಮಕ್ಕಿಂತ ಭಿನ್ನ
– ಹಿಂದೂ ಧರ್ಮ ಮತ್ತು ಲಿಂಗಾಯತ ಸಂಸ್ಕøತಿ, ಪರಂಪರೆ, ಆಚರಣೆ ಭಿನ್ನ
– ಜೈನ, ಬೌದ್ಧ, ಮುಸ್ಲಿಂ, ಸಿಖ್ ಧರ್ಮಗಳಂತೆ ಪ್ರತ್ಯೇಕ ಧರ್ಮವಾಗುವ ಅರ್ಹತೆ ಇದೆ
– ವೀರಶೈವ ಪರಂಪರೆಯಡಿ ಗುರುತಿಸಿಕೊಂಡಿರುವವರು ಈ ಧರ್ಮ ಸೇರಬಹುದು
– ವೀರಶೈವರಿಗೆ ಯಾವುದೇ ಅಭ್ಯಂತರ ಇರಬಾರದು, ಮುಕ್ತ ಅವಕಾಶ ನೀಡಬೇಕು
– ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಘೋಷಿಸಲು ಕೇಂದ್ರಕ್ಕೆ ಶಿಫಾರಸು ಮಾಡಬಹುದು.

Comments

Leave a Reply

Your email address will not be published. Required fields are marked *