`ಜೆಸಿಬಿ’ ಎಂಬ ಭ್ರಷ್ಟ ಪಕ್ಷಗಳು ರಾಜ್ಯವನ್ನು ಲೂಟಿ ಹೊಡೆದಿದ್ದಾರೆ- ಎಸ್‍ಆರ್ ಹಿರೇಮಠ ಕಿಡಿ

ಹಾವೇರಿ: ರಾಜ್ಯದಲ್ಲಿ ಮೂರು ಪಕ್ಷಗಳು ಲೂಟಿಕೋರರ ಪಕ್ಷಗಳಾಗಿವೆ. ಕಳೆದ ಹಲವಾರು ವರ್ಷಗಳಿಂದ `ಜೆಸಿಬಿ’ ಎಂಬ ಭ್ರಷ್ಟ ಪಕ್ಷಗಳು ರಾಜ್ಯವನ್ನು ಲೂಟಿ ಹೊಡೆದಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಎಸ್‍ಆರ್ ಹಿರೇಮಠ ಕಿಡಿಕಾರಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನೈಸರ್ಗಿಕ ಸಂಪತ್ತನ್ನು ಕೊಳ್ಳೆ ಹೊಡೆದರು. ರೆಡ್ಡಿಯಂತಹ ಕಳ್ಳರ ತಾಳಕ್ಕೆ ಕುಣಿದು ಜೈಲು ಸೇರಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ ರಾಜ್ಯಕ್ಕೆ ದೊಡ್ಡ ಕಳಂಕವಾಗಿದ್ದಾರೆ. ಅಲ್ಲದೆ ಕಾಂಗ್ರೆಸ್ ಮೈತುಂಬಾ ಭ್ರಷ್ಟಾಚಾರ ಮೈಗೂಡಿಸಿಕೊಂಡಿದೆ. ಒಟ್ಟಿನಲ್ಲಿ ಇವರು ಸ್ವತಂತ್ರ ಭಾರತದ ಕನಸನ್ನು ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.

ಜೆಡಿಎಸ್ ಪಕ್ಷ ರಾಜ್ಯಸಭೆ ಸ್ಥಾನಗಳನ್ನು ಹರಾಜು ಇಟ್ಟು ಮಾರಿಕೊಂಡಿದೆ. ಇವರ ನಾಟಕದಿಂದ ರಾಜ್ಯ ಹಾಳಾಗಿ ಹೋಗಿದೆ. ಪ್ರಧಾನ ಮಂತ್ರಿ ದೇಶದ ಬ್ಯಾಂಕುಗಳು ದಿವಾಳಿಯಾದ್ರೂ ಮೌನ ವಹಿಸಿದ್ದಾರೆ. ಬ್ಯಾಂಕ್ ಕೊಳ್ಳೆ ಹೊಡೆದ್ರೂ ಸುಮ್ಮನಿರುವ ಪ್ರಧಾನಿಗೆ ನಾಚಿಕೆಯಾಗಬೇಕು. ಅಲ್ಲದೇ ಪ್ರಧಾನಿ, ಜೇಟ್ಲಿ, ಅಮಿತ್ ಶಾ ರಿಂದ ದೇಶವಿನಾಶದತ್ತ ಸಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಮಲಿಂಗಾರೆಡ್ಡಿ ಸೋತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *