ಸಿನಿಮಾ ಸೆಟ್ ನ ಮೊದಲ ದಿನವೇ ಯಜಮಾನನಾಗಿ ಬಂದ ಚಾಲೆಂಜಿಂಗ್ ಸ್ಟಾರ್!

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾದ ಚಿತ್ರೀಕರಣ ಶುರುವಾಗಿದ್ದು, ಸಿನಿಮಾ ಸೆಟ್ ನ ಮೊದಲ ದಿನವೇ ಯಜಮಾನನಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದಾರೆ.

ಹುಟ್ಟುಹಬ್ಬಕ್ಕಾಗಿ ಬ್ರೇಕ್ ತೆಗೆದುಕೊಂಡಿದ್ದ ಡಿ ಬಾಸ್ ಹುಟ್ಟು ಹಬ್ಬ ಮುಗಿದ ತಕ್ಷಣವೇ ಯಜಮಾನನಾಗಿ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಟೈಟಲ್ ಕೇಳಿದರೇ ಸಾಕಷ್ಟು ನಿರೀಕ್ಷೆಗಳು ಮೂಡುವಂತಹ ಸಿನಿಮಾ ಇದಾಗಿದ್ದು, ಅದೇ ರೀತಿಯ ಡ್ರೆಸ್ ಮಾಡಿಕೊಂಡು ಶೂಟಿಂಗ್‍ನ ಸ್ಥಳಕ್ಕೆ ಬಂದಿದ್ದಾರೆ.

ದರ್ಶನ್ ಅಭಿನಯದ 51ನೇ ಸಿನಿಮಾ ಯಜಮಾನ ಚಿತ್ರವಾಗಿದ್ದು, ಸಿನಿಮಾದಲ್ಲಿ ದರ್ಶನ್ ಗೆಟಪ್ ತುಂಬಾ ವಿಭಿನ್ನವಾಗಿಯೇ ಇದೆ. ಚಿತ್ರೀಕರಣ ಸೋಮವಾರದಿಂದಲೇ ಶುರು ಆಗಿದೆ. ಡಿ ಬಾಸ್ ಈ ಚಿತ್ರದಲ್ಲಿ ಪಕ್ಕ ಕನ್ನಡದ ಮಣ್ಣಿನ ಮಗನ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಬಿಳಿ ಪಂಚೆ ಹಾಗೂ ಬಿಳಿ ಶರ್ಟ್ ಹಾಕಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.

ದರ್ಶನ್ ಹುಟ್ಟಿದ ತವರೂರಾದ ಮೈಸೂರಿನಲ್ಲಿ ಯಜಮಾನ ಸಿನಿಮಾದ ಚಿತ್ರೀಕರಣ ಶುರು ಆಗಿದೆ. ಚಿತ್ರೀಕರಣಕ್ಕಾಗಿ ಸಿನಿಮಾ ತಂಡ ಬೃಹತ್ ಮತ್ತು ಅದ್ಧೂರಿಯಾಗಿರುವ ಸೆಟ್ ಹಾಕಿದ್ದರು. ದರ್ಶನ್ ಜೊತೆಯಲ್ಲಿ ರಶ್ಮಿಕಾ ಮಂದಣ್ಣ ಹಾಗೂ ಧನಂಜಯ್ ಭಾಗಿ ಆಗಿದ್ದಾರೆ. ಕೃತಕವಾಗಿ ಹಾಕಲಾಗಿರುವ ಸೆಟ್ ನಲ್ಲಿ ಶೂಟಿಂಗ್ ಆರಂಭ ಆಗಿದೆ. ಮೈಸೂರಿನಲ್ಲಿ ಹಾಕಿರುವ ಸೆಟ್ ನಲ್ಲಿ ಚಿತ್ರೀಕರಣ ಮುಗಿದ ನಂತರ ರಿಯಲ್ ಲೊಕೇಷನ್ಸ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.

Comments

Leave a Reply

Your email address will not be published. Required fields are marked *