ಸ್ಟಾರ್ ಹೋಟೆಲ್‍ಗಳಲ್ಲಿ ಮಜಾ ಮಾಡ್ತಿದ್ದ ನಲಪಾಡ್ ಕಂಬಿ ಹಿಂದೆ- ತಟ್ಟೆ ಊಟ, ಲಾಕಪ್‍ನಲ್ಲೇ ನಿದ್ದೆ

ಬೆಂಗಳೂರು: ಉದ್ಯಮಿಯೊಬ್ಬರ ಮಗನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದ ಶಾಸಕ ಹ್ಯಾರಿಸ್ ಪುತ್ರ ಕಬ್ಬನ್ ಪಾರ್ಕ್ ಪೊಲೀಸರ ಮುಂದೆ ಸೋಮವಾರ ಶರಣಾಗಿದ್ದನು. ಫೈವ್ ಸ್ಟಾರ್ ಹೋಟೆಲ್ ಗಳಲ್ಲಿ ಮಜಾ ಮಾಡುತ್ತಿದ್ದ ಹ್ಯಾರಿಸ್ ಈಗ ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿವರೆಗೂ ನಿದ್ದೆಯಿಲ್ಲದೆ ಕೂರುವಂತಾಗಿತ್ತು.

ಶನಿವಾರ ರಾತ್ರಿ ಉದ್ಯಮಿ ಲೋಕನಾಥ್ ಅವರ ಮಗ ವಿದ್ವತ್ ಜೊತೆ ಜಗಳವಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಬಳಿಕ ನಲಪಾಡ್ ಪಾರಾರಿಯಾಗಿದ್ದನು. ಆದ್ರೆ ಸೋಮವಾರ ಬೆಳಗ್ಗೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಮುಂದೆ ಶರಣಾಗಿದ್ದನು. ನಂತರ ಪೊಲೀಸರು ನಲಪಾಡ್ ನನ್ನು ತೀವ್ರ ವಿಚಾರಣೆ ನಡೆಸಿದ್ದಾರೆ. ರಾತ್ರಿ ಸುಮಾರು 8ಕ್ಕೆ ಆರಂಭವಾದ ನಲಪಾಡ್ ವಿಚಾರಣೆ 11ಗಂಟೆ ವರೆಗೂ ನಡೆದಿದೆ.

ಕೋರ್ಟ್ ಕಡಿಮೆ ಕಾಲಾವಧಿ ನೀಡಿರೋದ್ರಿಂದ ಪೊಲೀಸರು ಹಲ್ಲೆ ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಮೊಹಮ್ಮದ್ ನಲಪಾಡ್ ಸೇರಿದಂತೆ ಏಳು ಆರೋಪಿಗಳನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ತರಿಸಿದ ಊಟವನ್ನೇ ಆರೋಪಿ ನಲಪಾಡ್‍ಗೂ ರಾತ್ರಿ ನೀಡಿದ್ದಾರೆ. ವಿಚಾರಣೆ ವೇಳೆ ಘಟನೆ ನಡೆದಾಗ ಯಾರು ಇದ್ದರು, ಯಾವ ಕಾರಣಕ್ಕೆ ಗಲಾಟೆ ನಡೆಯಿತು? ವಿದ್ವತ್ ಮೇಲೆ ಹಲ್ಲೆ ಮಾಡಿದ್ದು ಯಾಕೆ? ಎಂಬ ಪ್ರಶ್ನೆಗಳನ್ನ ಪೊಲೀಸರು ಕೇಳಿದ್ದಾರೆ. ಆದ್ರೆ ಆರೋಪಿ ನಲಪಾಡ್ ಮಾತ್ರ ನಗುಮುಖದಿಂದಲೇ ಉತ್ತರ ನೀಡಿದ್ದಾನೆ ಎನ್ನಲಾಗಿದೆ.

ಪೊಲೀಸರು ರಾತ್ರಿ 11.30ವರೆಗೂ ವಿಚಾರಣೆ ನಡೆಸಿದ್ದು, ನಂತರ ನಲಪಾಡ್ ರಾತ್ರಿ 1 ಗಂಟೆವರೆಗೆ ರೌಡಿ ಟೀಮ್ ಜೊತೆ ಮಾತಾಡುತ್ತ ಕುಳಿತಿದ್ದನು. ಬಳಿಕ ಪೊಲೀಸರು ಲಾಕಪ್‍ನಲ್ಲೇ ಪೆಂಡಾಲ್ ಹಾಸಿ ಮಲಗಲು ಹೇಳಿದ್ದಾರೆ. ಪೊಲೀಸರು ಇಂದು ಬೆಳಗ್ಗೆ ಮತ್ತೆ ವಿಚಾರಣೆ ನಡೆಸಲಿದ್ದಾರೆ. ಆರೋಪಿ ನಲಪಾಡ್ ನನ್ನ ವಿಚಾರಣೆ ನಡೆಸುವಾಗ ಬೆಂಬಲಿಗರು ಪೊಲೀಸ್ ಠಾಣೆ ಹೊರಗಡೆ ಇದ್ದರು.

ಏನಿದು ಘಟನೆ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಊಟ ಮಾಡುವ ವಿಷಯಕ್ಕಾಗಿ ಕಿರಿಕ್ ತೆಗೆದು ಉದ್ಯಮಿ ಲೋಕ್‍ನಾಥ್ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದ. ವಿದ್ವತ್ ಸಿಂಗಾಪೂರ್ ನಲ್ಲಿ ಪದವಿ ಮುಗಿಸಿ ಇತ್ತೀಚೆಗೆ ನಗರಕ್ಕೆ ಆಗಮಿಸಿದ್ದರು. ಶನಿವಾರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ಊಟ ಮಾಡುವ ವಿಷಯಕ್ಕಾಗಿ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿ ಹ್ಯಾರಿಸ್ ಪುತ್ರ ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದಾರೆ. ಇದನ್ನು ಓದಿ: ಪಬ್ಲಿಕ್ ಟಿವಿ ಕ್ಯಾಮೆರಾಮೆನ್ ಮೇಲೆ ರೌಡಿ ನಲಪಾಡ್ ಗ್ಯಾಂಗ್ ಹಲ್ಲೆ

ಹಲ್ಲೆಗೊಳಗಾದ ವಿದ್ವತ್ ರನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ಶಾಸಕರ ಪುತ್ರ ಮತ್ತು ಆತನ ಗ್ಯಾಂಗ್ ಆಸ್ಪತ್ರೆಗೆ ನುಗ್ಗಿ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿದ್ದ ವಿದ್ವತ್ ಸಹೋದರ ಸಾತ್ವಿಕ್ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಇದೀಗ ವಿದ್ವತ್ ಮಲ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಈ ಸಂಬಂಧ ಮಹಮ್ಮದ್ ನಲಪಾಡ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಇದನ್ನು ಓದಿ: ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣ: ಕೊನೆಗೂ ಪೊಲೀಸರಿಗೆ ಶರಣಾದ ಶಾಸಕ ಹ್ಯಾರಿಸ್ ಪುತ್ರ

Comments

Leave a Reply

Your email address will not be published. Required fields are marked *