ಸೆಕ್ಸ್ ಗೇಮ್ ನಲ್ಲಿ ಲವ್ವರ್ ನ ಕೊಂದು ಪೀಸ್ ಪೀಸ್ ಮಾಡಿದ್ಳು- ದೇಹದ ಭಾಗವನ್ನ ಫ್ರೀಜರ್ ನಲ್ಲಿಟ್ಟು, ತಂತಿಯಲ್ಲೂ ನೇತು ಹಾಕಿದ್ಳು

ಮಾಸ್ಕೋ: 21 ವರ್ಷದ ವಿದ್ಯಾರ್ಥಿನಿಯೊಬ್ಬಳು ಸೆಕ್ಸ್ ಗೇಮ್ ನಲ್ಲಿ ತನ್ನ ಪ್ರಿಯಕರನನ್ನೇ ಕೊಲೆ ಮಾಡಿ, ನಂತರ ಆತನ ಮೃತದೇಹವನ್ನ ಪೀಸ್ ಪೀಸ್ ಮಾಡಿ ಮನೆಯಲ್ಲಿಟ್ಟಿದ್ದ ಭೀಕರ ಘಟನೆ ರಷ್ಯಾದಲ್ಲಿ ನಡೆದಿದೆ.

24 ವರ್ಷದ ಡ್ಮಿಟಿ ಸಿಂಕೇಚ್ ಪ್ರೇಮಿಯಿಂದಲೇ ಹತ್ಯೆಯಾದ ದುರ್ದೈವಿ. ಆರೋಪಿ ಅನಸ್ತಾಸಿಯಾ ಒನೆಜೈಯಾ ಸೆಕ್ಸ್ ಗೇಮ್‍ಗಾಗಿ ಈ ಭೀಕರ ಕೃತ್ಯ ಎಸಗಿದ್ದಾಳೆ. ಒರಿಯಾಲ್‍ನಲ್ಲಿರುವ ಫ್ಲಾಟ್‍ನಲ್ಲಿ ಪ್ರಿಯಕರನನ್ನ ಕೊಲೆ ಮಾಡಿ ನಂತರ ಅಡುಗೆಮನೆಯಲ್ಲಿದ್ದ ಚಾಕುವಿನಿಂದ ಮೃತದೇಹವನ್ನ ತುಂಡು ತುಂಡು ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಅನಸ್ತಾಸಿಯಾ ಮೊದಲು ಡ್ಮಿಟಿಯ ಶಿರಚ್ಛೇದ ಮಾಡಿದ್ದಳು. ನಂತರ ಅವನ ಗುಪ್ತಾಂಗಗಳನ್ನು ಕತ್ತರಿಸಿ ಹಾಕಿದ್ದಳು. ಬಳಿಕ ಬೆರಳು, ಕೆನ್ನೆ ಸೇರಿದಂತೆ ಇತರ ಅಂಗಗಳನ್ನೂ ಕತ್ತರಿಸಿ ವಿಕೃತಿ ಮೆರೆದಿದ್ದಳು. ಅಷ್ಟೇ ಅಲ್ಲದೇ ಕತ್ತರಿಸಿದ ದೇಹದ ಭಾಗಗಳಲ್ಲಿ ಕೆಲವನ್ನು ಡಸ್ಟ್ ಬಿನ್ ಗೆ ಹಾಕಿದ್ದಳು. ಇನ್ನೂ ಕೆಲವನ್ನ ಫ್ರೀಜರ್ ನಲ್ಲಿಟ್ಟಿದ್ದಳು. ಉಳಿದವುಗಳನ್ನು ಮನೆಯಲ್ಲೇ ತಂತಿಗಳಲ್ಲಿ ನೇತುಹಾಕಿದ್ದಳು ಎಂದು ಇಲ್ಲಿನ ಪತ್ರಿಕೆಗಳು ವರದಿ ಮಾಡಿವೆ.

ನೇತಾಡುತ್ತಿದ್ದ ಮಾಂಸದ ತುಂಡುಗಳನ್ನು ನೋಡಿದ್ದಾಗಿ ನೆರೆಹೊರೆಯವರು ಹೇಳಿದ್ದಾರೆ. ಅನಸ್ತಾಸಿಯಾಗೆ ಆಕೆಯ ಸಹೋದರಿ ಕರೆ ಮಾಡಿದ್ದು, ಏನು ಮಾಡುತ್ತಿದ್ದೀಯಾ ಎಂದು ಕೇಳಿದಾಗ ಪ್ರಿಯತಮನನ್ನು ಕತ್ತರಿಸುತ್ತಿದ್ದೇನೆ ಎಂದು ಅನಸ್ತಾಸಿಯಾ ಹೇಳಿದ್ದಳು. ನಂತರ ಸಹೋದರಿ, ಪೊಲೀಸ್ ಅಧಿಕಾರಿಯಾದ ತಂದೆಗೆ ವಿಷಯ ತಿಳಿಸಿದ್ದು ನಂತರ ಅಧಿಕಾರಿಗಳಿಗೆ ಮಾಹಿತಿ ರವಾನಿಸಲಾಗಿತ್ತು.

ಡ್ಮಿಟಿ ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು, ಕಲವು ವರ್ಷಗಳಿಂದ ಅನಸ್ತಾಸಿಯಾಳನ್ನು ಪ್ರೀತಿಸುತ್ತಿದ್ದನು. ಈ ಹಿಂದೆ ಅನಸ್ತಾಸಿಯಾಳ ಪತಿ ಕೂಡ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಎಂದು ತಿಳಿದು ಬಂದಿದೆ. ಅನಸ್ತಾಸಿಯಾ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಒಂದೂವರೆ ವರ್ಷ ಆಸ್ಪತ್ರೆಯಲ್ಲಿದ್ದು, ನಂತರ ಡಿಸ್ಚಾರ್ಜ್ ಆಗಿದ್ದಳು.

ಇದೀಗ ಆಕೆಯನ್ನ ಮತ್ತೆ ಮಾನಸಿಕ ಪರೀಕ್ಷೆಗೆ ಒಳಪಡಿಸುವಂತೆ ಕೋರ್ಟ್ ಹೇಳಿದ್ದು, ತನಿಖೆ ಮುಂದುವರೆದಿದೆ.

Comments

Leave a Reply

Your email address will not be published. Required fields are marked *