ಪ್ರಿಯಾ ವಾರಿಯರ್ ಸ್ಟೈಲಲ್ಲೇ ಕಿಸ್ ಶೂಟ್ ಮಾಡಿದ ಸ್ಯಾಂಡಲ್‍ವುಡ್ ನಟಿ

ಬೆಂಗಳೂರು: ಜಸ್ಟ್ 1 ವಿಡಿಯೋದಲ್ಲೇ ಪಡ್ಡೆ ಹುಡುಗರ ಹೃದಯ ಕದ್ದಿರುವ ಮಲಯಾಳಂ ಬೆಡಗಿ ಪ್ರಿಯಾ ವಾರಿಯರ್ ಸದ್ಯಕ್ಕೆ ಇಂಟರ್ ನೆಟ್ ಸೆನ್ಸೇಷನ್ ಆಗಿದ್ದಾರೆ. ಪ್ರಿಯಾ ವಾರಿಯರ್ ಹಾಡಿನಲ್ಲಿನ ಕಣ್ಣಿನ ನೋಟ ಎಂಥವರನ್ನು ಕ್ಷಣಕಾಲ ಮಗ್ನಗೊಳಿಸುವಂತೆ ಮಾಡಿತ್ತು. ಈಗ ಆಕೆಯ ಕಿಸ್ ಸ್ಟೈಲ್‍ಗೆ ಎಲ್ಲರೂ ಫಿದಾ ಆಗಿದ್ದು, ಕನ್ನಡದ ಚೆಲುವೆಯೂ ಸಹ ಮನಸೋತಿದ್ದಾರೆ.

ರಾಜು ಕನ್ನಡ ಮೀಡಿಯಂ ಚಿತ್ರದ ಬೆಡಗಿ ಆಶಿಕಾ ರಂಗನಾಥ್ ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಕಿಸ್ ಸ್ಟೈಲ್‍ಗೆ ಫಿದಾ ಆಗಿದ್ದು, ಪ್ರಿಯಾ ಸ್ಟೈಲ್‍ನಲ್ಲೇ ಆಶಿಕಾ ಕೂಡ ಕಿಸ್ ಅನ್ನು ಗನ್‍ನೊಳಗೆ ಲೋಡ್ ಮಾಡಿ ಶೂಟ್ ಮಾಡಿದ್ದಾರೆ.

ಆಶಿಕಾ ಪ್ರಿಯಾ ಸ್ಟೈಲ್‍ನಲ್ಲಿ ಕಿಸ್ ಮಾಡಿರುವ ವಿಡಿಯೋವನ್ನು ಇನ್ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋ ಪೋಸ್ಟ್ ಮಾಡಿದ 22 ಗಂಟೆಗೆ ಸುಮಾರು 1 ಲಕ್ಷಕ್ಕಿಂತ ಹೆಚ್ಚು ಬಾರಿ ವೀಕ್ಷಣೆಯಾಗಿದ್ದು, ಆಶಿಕಾ ವಿಡಿಯೋ ನೋಡಿರುವ ಪಡ್ಡೆ ಹುಡುಗರು ಮನಸೋತಿದ್ದಾರೆ. ಇದನ್ನು ಓದಿ: ಜಸ್ಟ್ 1 ವಿಡಿಯೋದಲ್ಲೇ ಇಂಟರ್ ನ್ಯಾಷನಲ್ ಸೆನ್ಸೇಷನ್! – ಕಣ್ಣೋಟದಿಂದಲೇ ಹುಡುಗರ ಮನಗೆದ್ದ ನಟಿ!

ನಟಿ ಪ್ರಿಯಾ ಪ್ರಕಾಶ್ ಕೇರಳದ ತ್ರಿಶೂರ್ ಮೂಲದವರು. ಪ್ರಸ್ತುತ ಅಲ್ಲಿನ ಸ್ಥಳೀಯ ಕಾಲೇಜಿನಲ್ಲಿ ಬಿಕಾಂ ಪದವಿ ಮಾಡುತ್ತಿದ್ದಾರೆ. ಸಿನಿಮಾ ಆಡಿಷನ್ ವೇಳೆ ಇವರಿಗೆ ಸಣ್ಣ ಪಾತ್ರವನ್ನು ನೀಡಲಾಗಿದ್ದು, ಆದರೆ ಇದೀಗ ಈ ಪಾತ್ರದ ಮೂಲಕವೇ ಎಲ್ಲರ ಗಮನ ಸೆಳೆದಿದ್ದಾರೆ. ಚಿತ್ರದ ಹಾಡು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಯಾಗುತ್ತಿದಂತೆ ಮಲಯಾಳಂ ಮಾತ್ರವಲ್ಲದೇ ಟಾಲಿವುಡ್, ಬಾಲಿವುಡ್ ನಲ್ಲೂ ಹೆಚ್ಚು ವೈರಲ್ ಆಗಿದೆ. ಪ್ರಿಯಾ ಅವರ ಒರು ಅಡಾರ್ ಲವ್ ಚಿತ್ರ ಏಪ್ರಿಲ್ ನಲ್ಲಿ ತೆರೆ ಕಾಣಲಿದೆ ಎಂದು ಚಿತ್ರ ತಂಡ ತಿಳಿಸಿದೆ. ಇದನ್ನು ಓದಿ: ಇನ್ ಸ್ಟಾಗ್ರಾಮ್ ನಲ್ಲಿ ಹೊಸ ದಾಖಲೆ ಬರೆದ ಪ್ರಿಯಾ ವಾರಿಯರ್!

https://www.instagram.com/p/BfP_VnGBttE/?hl=en&taken-by=ashika_rangnath

Comments

Leave a Reply

Your email address will not be published. Required fields are marked *