ಪೋಖ್ರಾನ್ ನಲ್ಲಿ ತರಬೇತಿ ವೇಳೆ ಬಾಂಬ್ ಬ್ಲಾಸ್ಟ್ ಆಗಿ ಹರಿಹರದ ಯೋಧ ಹುತಾತ್ಮ- ಇಂದು ಅಂತ್ಯಕ್ರಿಯೆ

ದಾವಣಗೆರೆ: ರಾಜಸ್ಥಾನದ ಪೋಖ್ರಾನ್ ನಲ್ಲಿ ತರಬೇತಿ ವೇಳೆ ಬಾಂಬ್ ಬ್ಲಾಸ್ಟ್ ಆಗಿ ದಾವಣಗೆರೆ ಜಿಲ್ಲೆಯ ಹರಿಹರದ ಯೋಧರೊಬ್ಬರು ವೀರಮರಣ ಹೊಂದಿದ್ದರು.

ಬುಧವಾರ ರಾತ್ರಿ ಹರಿಹರ ನಗರಕ್ಕೆ ಯೋಧ ಜಾವೇದ್ ರವರ ಪಾರ್ಥಿವ ಶರೀರ ಆಗಮಿಸಿದೆ. ಜಾವೇದ್ 2004ರಲ್ಲಿ ಸೇನೆಗೆ ಸೇರ್ಪಡೆಯಾಗಿದ್ದರು. ಕಳೆದ 12 ರಂದು ಆರ್ಮಿ ಮದ್ರಾಸ್ ಎಂಜಿನಿಯರ್ ಗ್ರೂಪ್ ನಲ್ಲಿ ತರಬೇತಿ ವೇಳೆ ಬಾಂಬ್ ಬ್ಲಾಸ್ಟ್ ಆಗಿತ್ತು.

ಹರಿಹರದ ಯೋಧನ ನಿವಾಸದಲ್ಲಿ ಬೆಳಗ್ಗೆಯಿಂದ ಮುಸ್ಲಿಂ ಸಂಪ್ರದಾಯದಂತೆ ವಿಧಿವಿಧಾನಗಳನ್ನು ಮಾಡಲಾಗುತ್ತಿದ್ದು, ಹತ್ತು ಗಂಟೆಯ ನಂತರ ಮೆರವಣಿಗೆ ಮೂಲಕ ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗುವುದು. ನಂತರ ಮಧ್ಯಾಹ್ನ ಸಕಲ ಸರ್ಕಾರಿ ಗೌರವದೊಂದಿದೆ ತುಂಗಾಭದ್ರ ನದಿಯ ದಡದಲ್ಲಿ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೆದಿದೆ.

Comments

Leave a Reply

Your email address will not be published. Required fields are marked *