ಕಾರವಾರ: ಮನೆಯ ಮುಂದೆ ಆಟವಾಡುತ್ತಿದ್ದಾಗ ಹಸುವೊಂದು ಬಂದು ತಮ್ಮನ ಮೇಲೆ ಎಗರಿದ್ದು, ಕೂಡಲೇ ತನ್ನ ತಮ್ಮನ್ನು ಅಕ್ಕ ರಕ್ಷಣೆ ಮಾಡಿ ಜೀವ ಉಳಿಸಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ನವಿಲ್ ಗೋಣ್ ನಲ್ಲಿ ನಡೆದಿದೆ.
ಸೋಮವಾರ ಬೆಳಗ್ಗೆ ಮನೆಯ ಮುಂದೆ ಕಿರಣ್ ಎಂಬವರ ಮಕ್ಕಳಾದ ಕಾರ್ತಿಕ್ ಹಾಗೂ ಆರತಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಹಸುವೊಂದು ಬಂದು ಎರಗಿದೆ. ತಕ್ಷಣದಲ್ಲೇ ಆ ಪುಟ್ಟ ಹುಡುಗಿ ಚಿಕ್ಕ ಸೈಕಲ್ನಲ್ಲಿ ಕುಳಿತಿದ್ದ ತಮ್ಮನನ್ನು ತನ್ನ ಕೈಗಳಿಂದ ಬಾಚಿ ಹೆದರದೇ ರಕ್ಷಿಸಿದ್ದಾಳೆ. ಸದ್ಯ ಈ ಘಟನೆಯಿಂದ ಯಾವುದೇ ಪ್ರಾಣಾಪಾಯವಿಲ್ಲದೇ ಇಬ್ಬರೂ ಸುರಕ್ಷಿತವಾಗಿದ್ದಾರೆ.

ಸ್ವಲ್ಪ ಸಮಯದ ನಂತರ ಮನೆಯವರು ಬಂದು ಹಸುವನ್ನು ಓಡಿಸಿದ್ದಾರೆ. ಈಕೆಯ ಧೈರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಕ್ಕ ತನ್ನ ತಮ್ಮನನ್ನು ಹಸುವಿನಿಂದ ರಕ್ಷಿಸಿದ ವೀಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ದೃಶ್ಯಾವಳಿ ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ.
https://www.youtube.com/watch?v=tY7SmCyRt3s








Leave a Reply