ನಿಮಗೆ ಬೇರೆ ಕೆಲ್ಸ ಇಲ್ವಾ? ಬ್ರೇಕಿಂಗ್ ನ್ಯೂಸ್‍ಗೆ ನನ್ನ ವಿಷಯವನ್ನೇ ತೆಗೆದುಕೊಳ್ತೀರಾ – ಮಾಧ್ಯಮಗಳ ವಿರುದ್ಧ ಜಾರ್ಜ್ ಗರಂ

ಬೆಂಗಳೂರು: ನಿಮಗೆ ಬೇರೆ ಕೆಲಸ ಇಲ್ವಾ.. ಬ್ರೇಕಿಂಗ್ ಸುದ್ದಿ ಇಲ್ಲಾ ಅಂತ ನನ್ನ ವಿಷಯವನ್ನೇ ತೆಗೆದುಕೊಳ್ತೀರಾ ಅಂತ ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ.

ವಿಧಾನಸೌಧದಲ್ಲಿ ಗಣಪತಿ ಆತ್ಮಹತ್ಯೆ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದ್ದಕ್ಕೆ ಮಾಧ್ಯಮಗಳ ವಿರುದ್ಧ ಗರಂ ಆದ ಅವರು, ನನ್ನ ಪಿಎಸ್‍ಐ ಅನ್ನು ಸಿಬಿಐ ಕರೆಯಬಹುದು. ನನ್ನನ್ನು ಕರೆಯಬಹುದು ಅದು ಸಿಬಿಐ ಗೆ ಬಿಟ್ಟ ವಿಚಾರ. ನೀವು ನನ್ನನ್ನು ಕೇಳುವುದೇ ತಪ್ಪು, ಕೇಳಲೇಬಾರದು, ಸಿಬಿಐ ನನ್ನನ್ನು ಕರೆಯಲಿ ಬಿಡಲಿ ನಿಮಗೆ ಬೇರೆ ವಿಷಯ ಇಲ್ವಾ. ಬ್ರೇಕಿಂಗ್ ಸುದ್ದಿ ಇಲ್ಲಾ ಅಂತ ನನ್ನ ವಿಷಯವನ್ನೆ ತಗೆದುಕೊಳ್ತೀರಾ ಅಂತ ಕಿಡಿಕಾರಿದ್ದಾರೆ.

ಆ ಬೆಳವಣಿಗೆಯ ಒಂದೊಂದನ್ನು ಬ್ರೇಕಿಂಗ್ ನ್ಯೂಸ್ ಮಾಡಬೇಕಾ? ಕೊನೆಯವರೆಗೆ ಕಾಯಿರಿ ಆವಾಗ ಏನು ಅಂತ ಸುದ್ದಿ ಹಾಕ್ತೀರಾ ಅಂತ ಮಾಧ್ಯಮಗಳೆದುರು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಸಿಎಂ ಟ್ವೀಟ್ ವಾರ್ ಗೆ ಪ್ರತಿಕ್ರಿಯಿಸಿದ ಅವರು, ಮುಖ್ಯಮಂತ್ರಿಯವರ ಟ್ವಿಟ್ ಗೆ ನಮ್ಮ ಬೆಂಬಲ ಇದೆ. ಅವರು ಏನು ಹೇಳಿದ್ದಾರೋ ಅದು ಸರಿ ಇದೆ ಅಂತ ಸಮರ್ಥಿಸಿಕೊಂಡಿದ್ದಾರೆ.

ಏನದು ಟ್ವೀಟ್ ವಾರ್: ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪದಲ್ಲಿ ಭಾಗಿಯಾಗಿ ಪ್ರಧಾನಿ ಮೋದಿ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಳಿಕ ಸಿಎಂ ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ಪ್ರಧಾನಿ ಮೋದಿ ಅವರನ್ನು `ವಾಕ್ ದ ಟಾಕ್’ (ಬಹಿರಂಗ ಚರ್ಚೆ)ಗೆ ಆಹ್ವಾನಿಸಿದ್ದರು. ಪರಿವರ್ತನಾ ಯಾತ್ರೆಯಲ್ಲಿ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದ್ದು ಸಂತೋಷದ ವಿಚಾರವಾಗಿದೆ. ನಾನು ಇವಾಗ ನಿಮ್ಮನ್ನು `ವಾಕ್ ದ ಟಾಕ್’ಗೆ ಆಹ್ವಾನಿಸುತ್ತಿದ್ದೇನೆ. ಈ ಪ್ರಶ್ನೆಗಳಿಂದಲೇ ಆರಂಭವಾಗಲಿ ಎಂದು ಸವಾಲ್ ಹಾಕಿದ್ದಾರೆ.
1. ಲೋಕ್ ಪಾಲ್ ನೇಮಕ.
2. ಜಡ್ಜ್ ಲೋಯಾ ಸಾವಿರ ಪ್ರಕರಣಸ ತನಿಖೆ
3. ಅಮಿತ್ ಶಾ ಪುತ್ರ ಜೈಶಾ ಆಸ್ತಿ ಹೆಚ್ಚಳ ವಿಚಾರ
4. ಕಳಂಕರಹಿತ ಸಿಎಂ ಅಭ್ಯರ್ಥಿಗಳ ನೇಮಕ?

 

ಮೋದಿ ಅವರು ಪ್ರಧಾನಿ ಸ್ಥಾನದಂತ ಉನ್ನತ ಹುದ್ದೆಯಲ್ಲಿರಲು ನೈತಿಕವಾಗಿ ಅರ್ಹರಲ್ಲ. ದೇಶದ ಪ್ರಧಾನಿಯಾಗಿ ಮಾತನಾಡದೆ ಬಿಎಸ್‍ವೈ ಯಾತ್ರೆಯ ಮುಂದುವರಿದ ಭಾಗದಂತೆ ಸುಳ್ಳು ಮಾತನಾಡಿದ್ದಾರೆ. ಕರ್ನಾಟಕದಲ್ಲಿ ಅಲ್ಲ ಮೋದಿಗೆ ಕೌಂಟ್‍ಡೌನ್ ಶುರುವಾಗಿದೆ ಅಂತ ಮೋದಿ ಭಾಷಣಕ್ಕೆ ಸಿಎಂ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದರು.

Comments

Leave a Reply

Your email address will not be published. Required fields are marked *