ಮೋದಿ ಭಾಷಣವನ್ನ ಮೂರು ಅಕ್ಷರಗಳಲ್ಲಿ ಟೀಕಿಸಿದ ರಮ್ಯಾ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನಗರದ ಅರಮನೆ ಮೈದಾನದಲ್ಲಿ ಮಾಡಿದ ಭಾಷಣವನ್ನು ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಆಂಗ್ಲ ಭಾಷೆಯ ಮೂರು ಲೆಟರ್ ಗಳಲ್ಲಿ ವ್ಯಂಗ್ಯ ಮಾಡಿ ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ರೈತರಿಗೆ ಮೊದಲ ಅದ್ಯತೆ ನೀಡುವ ಮೂಲಕ ಅವರ ಆದಾಯವನ್ನು ದ್ವಿಗುಣಗೊಳಿಸುವ ಟಾಪ್ (T-O-P) ಯೋಜನೆಯನ್ನು ಜಾರಿಗೆ ತಂದಿದ್ದೇವೆ ಅಂತಾ ಹೇಳಿದ್ದರು. ಅದೇ ಟಾಪ್ ಯೋಜನೆಯನ್ನು ರಮ್ಯಾ (P-O-T) ಪಾಟ್ ಎಂದು ಬದಲಾಯಿಸಿದ್ದಾರೆ. ಈ ಮೂಲಕ ದೇಶದ ಜನರಿಗೆ ಮೋದಿ ಪಾಟ್ ನೀಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಧಾನಿಗಳು ತಮ್ಮ ಭಾಷಣದ ವೇಳೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಕುರಿತು ಪ್ರಸ್ತಾಪಿದರು. ದೇಶದಲ್ಲಿ ಪ್ರಮುಖವಾಗಿ ಅತೀ ಹೆಚ್ಚಿನ ರೈತರು ಬೆಳೆಯುವ ಟೊಮೆಟೋ, ಈರುಳ್ಳಿ ಮತ್ತು ಆಲೂಗಡ್ಡೆ (T-O-P) ಬೆಳೆಗಳಿಗೆ ಹೆಚ್ಚಿನ ಬೆಲೆ ಸಿಗುವಂತೆ ಮಾಡುತ್ತೆವೆ. ದೇಶದ ಎಪಿಎಂಸಿಗಳಲ್ಲಿ ರೈತರಿಗೆ ನೈಜ ಬೆಲೆ ಸಿಗಲಿದೆ ಎಂದರು.

ಅಲ್ಲದೇ ದೇಶದಲ್ಲಿ ಆಪರೇಷನ್ ಗ್ರೀನ್ಸ್ ಯೋಜನೆ ಘೋಷಣೆ ಮಾಡಿದ್ದೇವೆ. ಇದರಿಂದ ರೈತರಿಗೆ ಲಾಭ ಬರುವ ರೀತಿಯಲ್ಲಿ ವ್ಯವಸ್ಥೆ ಜಾರಿಗೆ ಬರಲಿದೆ. ರೈತ ಬೆಳೆಯುವ ಎಲ್ಲಾ ರೀತಿಯ ಹಣ್ಣು ಹಂಪಲು ಇದರ ಅಡಿ ಬರಲಿದೆ. ಇದನ್ನ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದೇನೆ ಎಂದರು.

ಪ್ರಧಾನಿ ಮೋದಿ ಅವರ ಟಾಪ್ (ಟಿಓಪಿ) ಕುರಿತು ಟ್ವೀಟ್ ಮಾಡಿರುವ ರಮ್ಯಾ ಅವರು, ನೀವು `ಪಿಓಟಿ’ ನಲ್ಲಿದ್ದಾಗ ಹಾಗೇ ಆಗುತ್ತದೆ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ. ಮೋದಿ ಭಾಷಣವನ್ನು ಟೀಕಿಸಿದ ರಮ್ಯಾ ಅವರ ಟ್ವೀಟ್ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಿ.

Comments

Leave a Reply

Your email address will not be published. Required fields are marked *