ಚಿಕ್ಕಮಗಳೂರು: ಪ್ರೀತಿಯ ವಿಚಾರವಾಗಿ ಎರಡು ಗುಂಪುಗಳ ನಡುವೆ ಗ್ಯಾಂಗ್ ವಾರ್ ನಡೆದಿದ್ದು, ಗಾಯಾಳುಗಳು ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಆಸ್ಪತ್ರೆಗೆ ನುಗ್ಗಿದ ಇನ್ನೊಂದು ಟೀಂ ಚಿಕಿತ್ಸೆ ಪಡೆಯುತ್ತಿದ್ದವರ ಮೇಲೆ ಮತ್ತೊಮ್ಮೆ ಚಾಕು, ದೊಣ್ಣೆಗಳಿಂದ ಹಲ್ಲೆ ಮಾಡಿರುವ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ನಗರದ ಪ್ರಮುಖ ಗುಂಪುಗಳು ಎಂದು ಗುರುತಿಸಿಕೊಳ್ಳುವ ಜೋಹರ್ ಹಾಗೂ ಕದೀರ್ ಗ್ಯಾಂಗ್ ಗಳ ನಡುವೆ ಪ್ರೀತಿಯ ವಿಚಾರವಾಗಿ ಜಗಳ ಏರ್ಪಟ್ಟಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಶುಕ್ರವಾರ ರಾತ್ರಿ ಎರಡು ತಂಡಗಳ ನಡುವೆ ನಗರದ ನೂರಾನಿ ಮಸೀದಿ ಬಳಿ ಗ್ಯಾಂಗ್ ವಾರ್ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಎರಡು ಗ್ಯಾಂಗ್ ಸದಸ್ಯರ ಪರಸ್ಪರ ನಡುವೆ ದೊಣ್ಣೆ, ಚಾಕುವಿನಿಂದ ಹಲ್ಲೆ ಮಾಡಿಕೊಂಡಿದ್ದಾರೆ. ಈ ವೇಳೆ ಗಲಾಟೆಯಲ್ಲಿ ಹಲ್ಲೆಗೂಳಗಾದವರು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದವರ ಮೇಲೆಯೂ ಅಸ್ಪತ್ರೆಯ ಒಳಗೆ ಬಂದು ಚಾಕುವಿನಿಂದ ಮತ್ತೆ ಹಲ್ಲೆ ನಡೆಸಲಾಗಿದೆ.
ಶುಕ್ರವಾಗಿ ರಾತ್ರಿ ನಡೆದ ಗಲಾಟೆಯಲ್ಲಿ ಕದೀರ್ ತಂಡದ ಸದಸ್ಯರು ಗಾಯಗೊಂಡು ನಗರದ ಮಲ್ಲೇಗೌಡ ಸರ್ಕಾರಿ ಅಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇವರ ಮೇಲೆ ಜೋಹರ್ ತಂಡದ ಸದಸ್ಯರು ಮತ್ತೆ ಆಸ್ಪತ್ರೆಯ ತುರ್ತು ವಿಭಾಗದ ಘಟಕ ಒಳಪ್ರವೇಶಿಸಿ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡ ಜೂವೇರ್ ಎಂಬಾತನನ್ನು ಹಾಸನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕದೀರ್ ಗೆ ಮಲ್ಲೇಗೌಡ ಸರ್ಕಾರಿ ಅಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಆಸ್ಪತ್ರೆಗೆ ನುಗ್ಗಿ ಚಾಕುವಿನಿಂದ ದಾಳಿ ನಡೆಸಿದ ಪರಿಣಾಮ ಆಸ್ಪತ್ರೆಯ ಇತರೆ ರೋಗಿಗಳು ಹಾಗೂ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಗ್ಯಾಂಗ್ ವಾರ್ ಕುರಿತು ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


Leave a Reply