ಚಾಮರಾಜನಗರ: ಚಕ್ಕರ್ ಕಿಲ್ ಬ್ಯಾಕ್ ಜಾತಿಗೆ ಸೇರಿದ ಹಾವೊಂದು ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮದಲ್ಲಿ 2 ರಿಂದ ಮೂರು ನಿಮಿಷದ ಅವಧಿಯಲ್ಲಿ ನೂರಕ್ಕೂ ಅಧಿಕ ಮೊಟ್ಟೆಗಳನ್ನು ಇಟ್ಟು ಅಚ್ಚರಿ ಮೂಡಿಸಿದೆ.
ಗ್ರಾಮದ ಮಹದೇವಪ್ಪ ಎಂಬುವವರ ಮನೆಯಲ್ಲಿ ಹಾವೊಂದು ಬಂದಿರುವ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಸ್ನೇಕ್ ಮಹೇಶ್ ಹಾವನ್ನು ರಕ್ಷಿಸಿ ತಮ್ಮ ಮನೆಗೆ ಕೊಂಡೊಯ್ದಿದ್ದಾರೆ. ಮನೆಗೆ ಕೊಂಡೊಯ್ದ ವೇಳೆ ಮನೆಯಲ್ಲಿ 3 ನಿಮಿಷಗಳ ಅವಧಿಯಲ್ಲಿ ನೂರಕ್ಕೂ ಅಧಿಕ ಮೊಟ್ಟೆಗಳನ್ನು ಇಟ್ಟಿದೆ. ಇದನ್ನು ಕಂಡ ಸ್ನೇಕ್ ಮಹೇಶ್ ಆಶ್ಚರ್ಯ ಚಕಿತರಾಗಿದ್ದಾರೆ.

ಈ ಜಾತಿಯ ಹಾವು ಸುಮಾರು 50 ಕ್ಕೂ ಹೆಚ್ಚು ಮೊಟ್ಟೆಗಳನ್ನು ಇಡುವ ಸಾಮರ್ಥ್ಯವಿದೆ. ಇಷ್ಟು ಮೊಟ್ಟೆಯನ್ನು ಇಡಲು 2 ರಿಂದ 3 ಗಂಟೆ ಅವಧಿ ತೆಗೆದುಕೊಳ್ಳುತ್ತವೆ. ಆದರೆ ಈ ಹಾವು 3 ನಿಮಿಷದ ಅವಧಿಯಲ್ಲಿ ಇಷ್ಟು ಮೊಟ್ಟೆ ಇಟ್ಟಿರುವುದು ಎಲ್ಲರಿಗೂ ಆಶ್ಚರ್ಯ ಉಂಟು ಮಾಡಿದೆ.
ಸದ್ಯ ಹಾವನ್ನು ಹಾಗೂ ಮೊಟ್ಟೆಗಳನ್ನು ಕಾಡಿಗೆ ಬಿಡುವುದು ಸೂಕ್ತವಲ್ಲ ಎನ್ನುವ ನಿರ್ಧಾರಕ್ಕೆ ಮಹೇಶ್ ಬಂದಿದ್ದು, ಮನೆಯಲ್ಲೇ ರಕ್ಷಣೆ ಮಾಡುತ್ತಿದ್ದಾರೆ. 60 ರಿಂದ 70 ದಿನಗಳ ನಂತರ ಮೊಟ್ಟೆಯಿಂದ ಹಾವಿನ ಮರಿಗಳು ಬರಲಿದ್ದು, ತದನಂತರ ಹಾವನ್ನು ಹಾಗೂ ಮರಿಗಳನ್ನು ಕಾಡಿಗೆ ಬಿಡಲಾಗುವುದು ಎಂದು ಸ್ನೇಕ್ ಮಹೇಶ್ ಹೇಳಿದ್ದಾರೆ.







Leave a Reply