ಆಮ್ಲಜನಕ ಸಿಲಿಂಡರ್ ಜೊತೆ ಎಂಆರ್ ಐ ಸ್ಕ್ಯಾನಿಂಗ್ ಯಂತ್ರದಲ್ಲಿ ಸಿಲುಕಿ ವ್ಯಕ್ತಿ ಸಾವು!

ಮುಂಬೈ: ಎಂಆರ್ ಐ ಸ್ಕ್ಯಾನ್ ಮಾಡಿಸಲು ಆಸ್ಪತ್ರೆ ತೆರಳಿದ್ದ ವ್ಯಕ್ತಿಯ ಸಂಬಂಧಿ ಅದೇ ಯಂತ್ರದಲ್ಲಿ ಸಿಲುಕಿ ಸಾವನ್ನಪ್ಪಿರುವ ಘಟನೆ ಮುಂಬೈನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.

ರಾಜೇಶ್ ಮರು (32) ಮೃತ ಪಟ್ಟ ದುರ್ದೈವಿಯಾಗಿದ್ದು, ಶನಿವಾರ ಸಂಜೆ ಮುಂಬೈನ ಬಿಎಲ್‍ವೈ ನೈರ್ ಚಾರಿಟಬಲ್ ಆಸ್ಪತ್ರೆಗೆ ಸಂಬಂಧಿಕರನ್ನು ಭೇಟಿ ಮಾಡಲು ತೆರಳಿದ್ದ ವೇಳೆ ಘಟನೆ ಸಂಭವಿಸಿದೆ.

ಘಟನೆ ಕುರಿತು ಮಾಹಿತಿ ನೀಡಿದ ಮೃತ ರಾಜೇಶ್ ಕುಟುಂಬಸ್ಥರು, ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷದಿಂದಲೇ ದುರ್ಘಟನೆ ಸಂಭವಿಸಿದೆ ಎಂದು ಆರೋಪಿಸಿದ್ದಾರೆ. ಎಂಆರ್ ಐ ಕೊಠಡಿಗೆ ಲೋಹದ ವಸ್ತುಗಳನ್ನು ತೆಗೆದುಕೊಂಡು ಹೋಗಲು ಬಿಡುವುದಿಲ್ಲ ಎಂದು ಅಲ್ಲಿನ ಸಿಬ್ಬಂದಿಗೆ ತಿಳಿಸಿದ್ದೇವು. ಆದರೆ ಅವರು ಪ್ರತಿದಿನ ನಾವು ಇದೇ ಕೆಲಸವನ್ನು ಮಾಡುತ್ತೇವೆ. ಕೊಠಡಿಯಲ್ಲಿ ಯಂತ್ರ ಆಫ್ ಆಗಿದೆ ಎಂದು ಹೇಳಿದರು. ಆದರೆ ಕೊಠಡಿ ಪ್ರವೇಶ ಮಾಡುತ್ತಿದಂತೆ ಸ್ಕ್ಯಾನಿಂಗ್ ಯಂತ್ರ ರಾಜೇಶ್ ಹಾಗೂ ಆಮ್ಲಜನಕ ಸಿಲಿಂಡರ್ ಅನ್ನು ಸೆಳೆದುಕೊಂಡಿತು. ಈ ವೇಳೆ ರಾಜೇಶ್ ಯಂತ್ರದಲ್ಲಿ ಸಿಲುಕಿ ಸಾವನ್ನಪ್ಪಿದರು ಎಂದು ತಿಳಿಸಿದರು.

ಘಟನೆ ನಡೆದ ತಕ್ಷಣ ಎಚ್ಚೆತ್ತ ಆಸ್ಪತ್ರೆಯ ವಾರ್ಡ್ ಸಿಬ್ಬಂದಿ ರಾಜೇಶ್ ಅವರನ್ನು ಯಂತ್ರದಿಂದ ಹೊರಗೆಳೆಯಲು ಯಶ್ವಸಿಯಾದರೂ ಆ ವೇಳೆಗೆ ತೀವ್ರ ರಕ್ತಸ್ರಾವ ಉಂಟಾಗಿ ರಾಜೇಶ್ 10 ನಿಮಿಷಗಳಲ್ಲೇ ಸಾವನ್ನಪ್ಪಿದ್ದಾರೆ.

ರಾಜೇಶ್ ಸಾವಿಗೆ ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ ಕಾರಣವಾಗಿದ್ದು, ಈ ಕೂಡಲೇ ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ರಾಜೇಶ್ ಕುಟುಂಬ ಸಂಬಂಧಿಕರು ಆಗ್ರಹಿಸಿದ್ದಾರೆ.

ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ವಿರುದ್ಧ ಕರ್ತವ್ಯ ಲೋಪದ ಆರೋಪದಡಿ ಪ್ರಕರಣ ದಾಖಲಿಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ.

ಸಾಂದರ್ಭಿಕ ಚಿತ್ರ

Comments

Leave a Reply

Your email address will not be published. Required fields are marked *