44ರ ಐಶ್ವರ್ಯಾ ರೈ ದೇಸಿ ಲುಕ್‍ನಲ್ಲಿ ಫುಲ್ ಮಿಂಚಿಂಗ್- ಫೋಟೋಗಳಲ್ಲಿ ನೋಡಿ

ನವದೆಹಲಿ: ಮಾಜಿ ವಿಶ್ವ ಸುಂದರಿ, ಕುಡ್ಲದ ಬೆಡಗಿ ಐಶ್ವರ್ಯಾ ರೈ ಬಚ್ಚನ್ ತಮ್ಮ 44ರ ವಯಸ್ಸಿನಲ್ಲೂ ಸೌಂದರ್ಯದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ. ತಮ್ಮ ಸೌಂದರ್ಯ ಮತ್ತು ನೀಲಿ ಕಂಗಳ ಮೂಲಕ ಈಗಲೂ ಪಡ್ಡೆ ಹುಡಗರ ಹಾಟ್ ಫೇವರೇಟ್ ಆಗಿದ್ದಾರೆ.

ಶನಿವಾರ ಐಶ್ವರ್ಯ ರೈ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ‘ಫಸ್ಟ್ ಲೇಡಿಸ್ ಅವಾರ್ಡ್’ ಪ್ರಶಸ್ತಿಯನ್ನು ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ರಿಂದ ಪಡೆದುಕೊಂಡರು. ಪ್ರಶಸ್ತಿ ಸಮಾರಂಭಕ್ಕೆ ಆಗಮಿಸಿದ ಐಶ್ವರ್ಯಾ ಕಾರ್ಯಕ್ರಮದಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು.

ದೇಸಿ ಲುಕ್‍ನಲ್ಲಿ ಮಿಂಚಿಂಗ್: ಐಶ್ವರ್ಯಾ ಹೂವಿನ ಕಸೂತಿಯ ಬಾರ್ಡರ್ ವುಳ್ಳ ಸಿಲ್ವರ್ ಕಲರ್ ಸೀರೆ ಜೊತೆಗೆ ಕಡು ಕೆಂಪು ಬಣ್ಣದ ಬ್ಲೌಸ್ ಧರಿಸಿ ಅಪ್ಸರೆಯಂತೆ ಮಿಂಚುತ್ತಿದ್ರು. ಬ್ಲೌಸ್ ಗೆ ತಕ್ಕಂತೆ ಕೆಂಪು ಬಣ್ಣದ ಲಿಪ್‍ಸ್ಟಿಕ್, ಹಣೆಯ ಮೇಲೊಂದು ಚಿಕ್ಕದಾದ ಬಿಂದಿ ಐಶ್ವರ್ಯಾರ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದವು. ಕೈಗೆ ಹೆಚ್ಚಿಗೆ ಬಳೆ ಹಾಕದೇ ಒಂದೇ ಒಂದು ಬೆಳ್ಳಿಯ ಕಡಗ, ಬೆರಳಿಗೆ ಉಂಗುರವನ್ನು ಧರಿಸಿ ಸಿಂಪಲ್ ಡ್ರೆಸ್‍ನಲ್ಲಿಯೇ ರಿಚ್ ಲುಕ್‍ನಲ್ಲಿ ಕಾಣಿಸುತ್ತಿದ್ರು. ಐಶ್ವರ್ಯ ಶನಿವಾರ ಧರಿಸಿದ್ದ ಸೀರೆಯನ್ನು ಖ್ಯಾತ ಡಿಸೈನೆರ್ ಸಬ್ಯಸಾಚಿ ವಿನ್ಯಾಸಗೊಳಿಸಿದ್ದಾರೆ.

112 ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮೊದಲ ಮಹಿಳೆಯರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಐಶ್ವರ್ಯಾ ರೈ ಕ್ಯಾನ್ಸ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾರತದಿಂದ ಆಯ್ಕೆಯಾದ ಮೊದಲ ಜೂರಿ ಆಗಿದ್ದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ವ್ಯಾಪಕ ಸಂಶೋಧನೆ ಮೂಲಕ ಸಾಧಕರ ಪಟ್ಟಿಯನ್ನು ತಯಾರಿಸಿದೆ. ಈ ಹಿನ್ನೆಲೆಯಲ್ಲಿ ಐಶ್ವರ್ಯಾರಿಗೆ `ಫಸ್ಟ್ ಲೇಡಿಸ್ ಅವಾರ್ಡ್’ ನೀಡಿ ಗೌರವಿಸಲಾಗಿದೆ.

Comments

Leave a Reply

Your email address will not be published. Required fields are marked *