ಅಪಘಾತದಲ್ಲಿ ಪತಿ ಸಾವು- ಮನನೊಂದು 5ನೇ ಮಹಡಿಯಿಂದ ಜಿಗಿದ ಪತ್ನಿ- ವಿಡಿಯೋ ನೋಡಿ

ಗಾಂಧಿನಗರ: 38 ವರ್ಷದ ಮಹಿಳೆಯೊಬ್ಬರು ಪತಿಯ ಸಾವಿನಿಂದ ಮನನೊಂದು 5ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸೂರತ್‍ನ ಸಿಟಿ ಲೈಟ್ ಏರಿಯಾದ ನಿವಾಸಿ ಶ್ವೇತಾ ಸುರೇಖಾ ಆತ್ಮಹತ್ಯೆಗೆ ಶರಣಾದ ಗೃಹಿಣಿ. ನಗರದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಶ್ವೇತಾ ಪತಿ ಆನಂದ್ ನಾವಲ್ ಸುರೇಕಾ ಶುಕ್ರವಾರ ಮಗ್ದಲ್ಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಆನಂದ್ ಕೆಲಸದ ನಿಮಿತ ಶುಕ್ರವಾರ ಬೆಳಗ್ಗೆ ಸುಮಾರು 8.30ಕ್ಕೆ ಅಭವ ಗ್ರಾಮಕ್ಕೆ ತೆರಳಿದ್ದರು. ಗ್ರಾಮದಿಂದ ಹಿಂದಿರುಗುವಾಗ ಲಾರಿಯೊಂದು ಆನಂದ್ ಮೇಲೆಯೇ ಹರಿದಿತ್ತು.

ಪತಿಯ ಸಾವಿನಿಂದ ಮನನೊಂದ ಶ್ವೇತಾ ಸೋಮವಾರ ಬೆಳಗ್ಗೆ 8.30ಕ್ಕೆ ತಾವು ವಾಸವಿದ್ದ ಫ್ಲ್ಯಾಟ್‍ನ ಬಾತ್‍ರೂಮ್ ಕಿಟಕಿಯಿಂದ ಧುಮುಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶ್ವೇತಾ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ದೃಶ್ಯಾವಳಿಗಳು ಅಪಾರ್ಟ್ ಮೆಂಟ್‍ನ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ವಿಡಿಯೋದಲ್ಲಿ ಏನಿದೆ?: ಅಪಾರ್ಟ್ ಮೆಂಟ್ ಗ್ರೌಂಡ್ ಫ್ಲೋರ್ ನಲ್ಲಿ ಯುವಕನೊಬ್ಬ ಹೋಗುತ್ತಿರುವಾಗ ಮೊದಲಿಗೆ ಬಾತ್‍ರೂಮಿನ ಗ್ಲಾಸ್ ಕೆಳಗೆ ಬಿದ್ದಿದೆ. ಕೂಡಲೇ ಯುವಕ ಮೇಲೆ ನೋಡಿದಾಗ ಮಹಿಳೆ ಜಿಗಿಯುತ್ತಿರುವುದನ್ನು ನೋಡಿದ್ದಾರೆ. ಮಹಿಳೆ ಜಿಗಿಯುತ್ತಿದ್ದಂತೆ ಗಾಬರಿಗೊಂಡ ಯುವಕ ಮತ್ತೊಬ್ಬ ವ್ಯಕ್ತಿ ಇಬ್ಬರೂ ಸೇರಿಕೊಂಡು ಶ್ವೇತಾರನ್ನು ಹಿಡಿಯಲು ಯತ್ನಿಸಿದ್ದಾರೆ. ಕ್ಷಣಾರ್ಧದಲ್ಲಿ ಶ್ವೇತಾ ಕೆಳಗೆ ಬಿದ್ದಿದರಿಂದ ತಲೆಗೆ ಗಂಭೀರ ಗಾಯವಾಗಿ ರಕ್ತಸ್ರಾವದಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಶ್ವೇತಾರನ್ನು ರಕ್ಷಿಸಲು ಮುಂದಾಗಿದ್ದ ಯುವಕನ ಮೊಳಕಾಲು ಮತ್ತು ಕೈಗೆ ಗಾಯಗಳಾಗಿವೆ.

ಶುಕ್ರವಾರ ಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರಿಂದ ಶ್ವೇತಾ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು. ಶ್ವೇತಾ ಸುರೇಕಾ ಬಾತ್‍ರೂಮ್ ಕಿಟಿಕಿಯಿಂದ ಧುಮುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಮ್ರಾ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *