ಸಚಿವ ರೋಷನ್ ಬೇಗ್‍ಗೆ ಇಡಿ ಶಾಕ್!

ಬೆಂಗಳೂರು: ಇಂಧನ ಸಚಿವ ಡಿ.ಕೆ. ಶಿವಕುಮಾರ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯವರು ದಾಳಿ ನಡೆಸಿದ ಬೆನ್ನಲ್ಲೇ ರಾಜ್ಯ ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್ ಸರ್ಕಾರಕ್ಕೆ ಜಾರಿ ನಿರ್ದೇಶನಾಲಯ(ಇಡಿ) ಶಾಕ್ ಕೊಟ್ಟಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಆರೋಪದಲ್ಲಿ ಹಜ್ ಮತ್ತು ನಗರಾಭಿವೃದ್ಧಿ ಸಚಿವ ರೋಷನ್ ಬೇಗ್‍ಗೆ ಜಾರಿ ನಿರ್ದೇಶನಾಲಯ ನೋಟಿಸ್ ಕೊಟ್ಟಿದೆ. ಅಷ್ಟೇ ಅಲ್ಲದೆ, ಹವಾಲಾ ಹಣದ ಶಂಕೆಯಲ್ಲಿ ರೋಷನ್ ಬೇಗ್ ಜೊತೆಗೆ ಪುತ್ರಿ, ಪುತ್ರನಿಗೂ ನೋಟಿಸ್ ಜಾರಿ ಮಾಡಿದೆ.

ರೋಷನ್ ಬೇಗ್ ಮಗಳು ಸಬೀಹಾ ಫಾತೀಮಾ ಹಾಗೂ ಮಗ ರುಮಾನ್ ಬೇಗ್ ಒಡೆತನದ ರುಮಾನ್ ಎಂಟರ್‍ಪ್ರೈಸಸ್ ಎಂಬ ಸಾಫ್ಟ್ ವೇರ್ ಕಂಪನಿಯು 2007ರಲ್ಲಿ ಆರಂಭವಾಗಿದೆ. ದುಬೈಯಿಂದ ಬಂದಿರುವ ಹಣಕ್ಕೆ ಸಮರ್ಪಕ ಲೆಕ್ಕ ನೀಡದ ಹಿನ್ನಲೆಯಲ್ಲಿ ಈ ನೋಟಿಸ್ ಜಾರಿಯಾಗಿದೆ ಎಂದು ಹೇಳಲಾಗುತ್ತಿದೆ.

ನೊಟೀಸ್ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆಗಿದ್ದೇ ತಡ ತರಾತುರಿಯಲ್ಲಿ ಸಿಎಂ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾಗೆ ರೋಷನ್ ಬೇಗ್ ದೌಡಾಯಿಸಿದರು. ಸಿಎಂ ಸಿದ್ದರಾಮಯ್ಯ ಜೊತ ರೋಷನ್ ಬೇಗ್ ಈ ವಿಚಾರದ ಬಗ್ಗೆ ಚರ್ಚೆ ನಡೆಸಿದರು.

Comments

Leave a Reply

Your email address will not be published. Required fields are marked *