ಮೌರ್ಯ ಸಾಮ್ರಾಜ್ಯದಲ್ಲಿ ಒಂದಾಗ್ತಾರ ಅಪ್ಪು-ಕಿಚ್ಚ-ಉಪ್ಪಿ!?

ಬೆಂಗಳೂರು: 2017ರಲ್ಲಿ `ರಾಜಕುಮಾರ’ ಮತ್ತು `ಅಂಜನೀಪುತ್ರ’ ಸಿನಿಮಾಗಳ ಮೂಲಕ ಸಿಲ್ವರ್ ಸ್ಕ್ರೀನ್‍ನಲ್ಲಿ ಶೈನ್ ಆದ ಪವರ್ ಸ್ಟಾರ್ ಮುಂದೇನು ಮಾಡ್ತಾರೆ ಅಂತ ಅಭಿಮಾನಿಗಳಲ್ಲಿ ಪ್ರಶ್ನೆ ಹುಟ್ಟಿಕೊಂಡಿದೆ. ಇದರ ಮಧ್ಯೆ ಮೌರ್ಯ ಸಾಮ್ರಾಜ್ಯದ ದೊರೆ ಚಂದ್ರಗುಪ್ತ ಮಹಾರಾಜ ಗೆಟಪ್‍ನಲ್ಲಿ ಪುನೀತ್ ಕಾಣಿಸಿಕೊಳ್ತಾರೆ ಅನ್ನೊ ಖಬರ್‍ದಾರ್ ನ್ಯೂಸ್ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ.

ಕನ್ನಡ ಬೆಳ್ಳಿತೆರೆಯ ಮೇಲೆ ಮೌರ್ಯ ಸಾಮ್ರಾಜ್ಯ ಚಿತ್ತಾರವಾಗಲಿದ್ದು, ಈ ಬಿಗ್ ಸಿನಿಮಾದಲ್ಲಿ ಪವರ್‍ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಣಿಸಿಕೊಳ್ಳಲಿದ್ದಾರೆ ಅಂತಾ ಹೇಳಲಾಗುತ್ತಿದೆ.

ನಿರ್ಮಾಪಕ ಮುನಿರತ್ನ ಸದ್ಯ ಸ್ಯಾಂಡಲ್‍ವುಡ್‍ನ ಮಹತ್ವಕಾಂಕ್ಷೆಯ ಸಿನಿಮಾ `ಮುನಿರತ್ನ ಕುರುಕ್ಷೇತ್ರ’ ಚಿತ್ರದ ನಿರ್ಮಾಣದಲ್ಲಿ ಮಗ್ನರಾಗಿದ್ದಾರೆ. ಕುರುಕ್ಷೇತ್ರದ ಬಳಿಕ ಮತ್ತೊಂದು ಐತಿಹಾಸಿಕ ಕಥೆಯುಳ್ಳ ಮೌರ್ಯ ಸಾಮ್ರಜ್ಯದ ಮಹಾರಾಜ ಚಂದ್ರಗುಪ್ತರ ಬಗ್ಗೆ ಚಿತ್ರ ನಿರ್ಮಿಸಲು ಪ್ಲಾನ್ ಮಾಡಿದ್ದಾರೆ. ‘ಚಾಣಿಕ್ಯ ಚಂದ್ರಗುಪ್ತ’ ಕಥೆಯನ್ನ ಮುನಿರತ್ನರವರೇ ಬರೆದ್ದಿದ್ದು, ಮುಂದಿನ ವರ್ಷದ ಜೂನ್ ಅಥವಾ ಜುಲೈನಲ್ಲಿ ಈ ಚಿತ್ರವನ್ನ ನಿರ್ಮಾಣ ಮಾಡುವ ಯೋಜನೆಯಲ್ಲಿದ್ದಾರೆ. ಕುರುಕ್ಷೇತ್ರ ಚಿತ್ರದಂತೆ ಈ ಚಿತ್ರದಲ್ಲಿಯೂ ಸ್ಯಾಂಡಲ್‍ವುಡ್ ಸ್ಟಾರ್ ಮಹೋದಯರನ್ನು ಒಂದೂಗುಡಿಸುವ ಆಲೋಚನೆಯಲ್ಲಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ನಟಿಸುವಂತೆ ಕೇಳಿಕೊಳ್ಳಲು ಮುನಿರತ್ನ ನಿರ್ಧರಿಸಿದ್ದಾರೆ.

ಈ ಬಗ್ಗೆ ಸ್ವತಃ ಮುನಿರತ್ನ ಅವರೇ ಮಾಧ್ಯಮದ ಕೆಲ ಪ್ರತಿನಿಧಿಗಳಿಗೆ ಇತ್ತೀಚೆಗೆ ಅನೌಪಚಾರಿಕವಾಗಿ ಮಾಹಿತಿ ನೀಡಿದ್ದಾರಂತೆ. ಚಿತ್ರದ ಕಥೆ ಹೆಣೆಯಲಾಗುತ್ತಿದ್ದು, ನಿರ್ದೇಶಕರನ್ನು ಕೂಡ ಹುಡುಕುತ್ತಿದ್ದಾರಂತೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಕ್ರಿಸ್ತ ಪೂರ್ವ 3ನೇ ಶತಮಾನದ ಮೌರ್ಯ ದೊರೆ ಚಂದ್ರಗುಪ್ತ ಮತ್ತು ಅವನ ಸಲಹೆಗಾರ ಗುರು ಚಾಣಕ್ಯ, ನಂದ ರಾಜವಂಶ, ಅಲೆಕ್ಸಾಂಡರ್ ದೊರೆ ಮತ್ತು ಮೌರ್ಯ ಸಾಮ್ರಾಜ್ಯದ ಸ್ಥಾಪನೆ ಕುರಿತು ಚಿತ್ರ ತಯಾರಿಸಲು ಸಿದ್ಧತೆ ನಡೆಸಿದ್ದಾರೆ ಅಂತಾ ಹೇಳಲಾಗಿದೆ.

Comments

Leave a Reply

Your email address will not be published. Required fields are marked *