ಪೊಲೀಸರ ಕಣ್ತಪ್ಪಿಸಿ ಈಜಲು ನೀರಿಗಿಳಿದ ಮಂಗ್ಳೂರು ಕಾಲೇಜು ವಿದ್ಯಾರ್ಥಿ ಸಾವು

ಮಂಡ್ಯ: ನಿಷೇಧದ ನಡುವೆಯೂ ಪೊಲೀಸರ ಕಣ್ಣುತಪ್ಪಿಸಿ ಈಜಲು ನೀರಿಗಿಳಿದ ಕಾಲೇಜು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಲಮುರಿಯಲ್ಲಿ ನಡೆದಿದೆ.

19 ವರ್ಷದ ಮಹಮದ್ ಸಾಹಿಲ್ ಮೃತ ದುರ್ದೈವಿ. ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ನೀರಿಗಿಳಿದು ಸಾಯುವವರ ಸಂಖ್ಯೆ ಹೆಚ್ಚಾಗಿದ್ದು, ಅದನ್ನು ತಪ್ಪಿಸಲು ಬಲಮುರಿಗೆ ಇಂದು ಮತ್ತು ನಾಳೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು.

ಮಂಗಳೂರಿನ ಶ್ರೀನಿವಾಸ್ ಕಾಲೇಜಿನಲ್ಲಿ ಬಿ.ಫಾರ್ಮ್ ಓದುತ್ತಿರೋ ಕೇರಳ ಮೂಲದ ಮಹಮದ್ ಸುಹೇಲ್, ತನ್ನ 15 ಜನ ಸ್ನೇಹಿತರೊಂದಿಗೆ ಇಂದು ಬಲಮುರಿಗೆ ಬಂದಿದ್ರು. ಬಲಮುರಿಗೆ ಪ್ರವೇಶ ನಿಷೇಧವಿದ್ರೂ, ಪೊಲೀಸರ ಕಣ್ಣುತಪ್ಪಿಸಿ ನೀರಿಗಿಳಿದಿದ್ದಾರೆ. ಈ ವೇಳೆ ನೀರಿನ ಸೆಳೆತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ.

ಸದ್ಯ ಪೊಲೀಸರು ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಜೊತೆಗೆ ಯಾವುದೇ ಕಾರಣಕ್ಕೂ ನಿಷೇಧಿತ ಪ್ರದೇಶಕ್ಕೆ ಆಗಮಿಸಿ ಪ್ರಾಣ ಕಳೆದುಕೊಳ್ಳದಂತೆ ಪೊಲೀಸರು ಮನವಿ ಮಾಡುತ್ತಿದ್ದಾರೆ.

ಘಟನೆ ಸಂಬಂಧ ಕೆಆರ್ ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Comments

Leave a Reply

Your email address will not be published. Required fields are marked *