ನಿರ್ದೇಶಕರನ್ನು ಭೇಟಿ ಮಾಡಿಸೋದಾಗಿ ಹೇಳಿ ಮಾಡೆಲ್ ಮೇಲೆ ಮೂವರಿಂದ ಗ್ಯಾಂಗ್‍ರೇಪ್

ನವದೆಹಲಿ: ರೂಪದರ್ಶಿಯೊಬ್ಬರ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ದಕ್ಷಿಣ ದೆಹಲಿಯ ಸರೋಜಿನಿ ನಗರದಲ್ಲಿ ನಡೆದಿದೆ.

ರೂಪದರ್ಶಿ ಬಿಹಾರ ಮೂಲದವರಾಗಿದ್ದು, ಮೂವರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಡಿಸೆಂಬರ್ 26 ರಂದು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಂತ್ರಸ್ತೆ 15-20 ದಿನಗಳ ಹಿಂದೆ ಆರೋಪಿಗಳನ್ನು ಭೇಟಿಯಾಗಿದ್ದು, ಆಗ ಮುಂಬೈನಲ್ಲಿ ಚನಲಚಿತ್ರ ಮತ್ತು ಟಿವಿ ನಿರ್ದೇಶಕರನ್ನು ಭೇಟಿ ಮಾಡಿಸುವುದಾಗಿ ಆರೋಪಿಗಳು ಹೇಳಿದ್ದರು ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 25 ರಂದು ಮಾಲ್‍ವೊಂದರಲ್ಲಿ ರೂಪದರ್ಶಿ ಮೂವರನ್ನ ಭೇಟಿಯಾಗಿದ್ದಾರೆ. ನಂತರ ಆರೋಪಿಗಳು ತಮ್ಮ ಫ್ಲಾಟ್‍ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *