KSRTC ಬಸ್ ಗೆ ಸೈಡ್ ಕೊಡದೆ 15 ಕಿ.ಮೀ ಸತಾಯಿಸಿದ ಬೈಕ್ ಸವಾರ

ತುಮಕೂರು: 15 ಕಿಲೋಮೀಟರ್ ವರೆಗೆ ಕೆಎಸ್‍ಆರ್‍ಟಿಸಿ ಬಸ್ ಗೆ ಸೈಡ್ ಕೊಡದೆ ಬೈಕ್ ಸವಾರ ಕಿರಿಕ್ ಮಾಡಿದ ಘಟನೆ ರಾಷ್ಟ್ರೀಯ ಹೆದ್ದಾರಿ 4ರ ದಾಬಸ್ ಪೇಟೆ ಬಳಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಂಗಳೂರಿನಿಂದ ತುಮಕೂರಿಗೆ ಬರುತ್ತಿದ್ದ ಕೆಎಸ್‍ಆರ್‍ಟಿಸಿ ಬಸ್ ಗೆ ಅಡ್ಡ ಬಂದ ಬೈಕ್ ಸವಾರ ಎಷ್ಟೇ ಹಾರ್ನ್ ಹೊಡೆದರು ಸೈಡ್ ಕೊಟ್ಟಿಲ್ಲ. ಅಷ್ಟೇ ಅಲ್ಲದೆ ಬಸ್ ಮುಂದೆ ನಿಧಾನವಾಗಿ ಆಮೆ ಗತಿಯಲ್ಲಿ ಬೈಕ್ ಓಡಿಸುತ್ತಾ ಚಾಲಕನನ್ನು ಸತಾಯಿಸಿದ್ದಾನೆ. ಪಕ್ಕಕ್ಕೂ ಹೋಗಲು ಬಿಡದೆ ಬಸ್ ಗೆ ಅಡ್ಡವಾಗಿ ಬಂದು ಕಾಡಿದ್ದಾನೆ. ಹೀಗೆ ಸುಮಾರು 15 ಕಿ.ಮಿವರೆಗೂ ಬಸ್ ಚಾಲಕನನ್ನು ಕಾಡಿದ ಬೈಕ್ ಸವಾರ ಬಳಿಕ ತುಮಕೂರು ಸಮೀಪ ಸೈಡ್ ಕೊಟ್ಟಿದ್ದಾನೆ. ಬೈಕ್ ಸವಾರನ ಕಿರಿಕಿರಿಗೆ ಪ್ರಯಾಣಿಕರು ಹಿಡಿಶಾಪ ಹಾಕಿದ್ದಾರೆ.

ಯಾವ ಕಾರಣಕ್ಕೆ ಬೈಕ್ ಸವಾರ ಈ ರೀತಿ ಕಿರಿಕ್ ಮಾಡಿದ ಅನ್ನೋದು ಗೊತ್ತಾಗಿಲ್ಲ. ಬೈಕ್ ಸವಾರ ಇಷ್ಟೆಲ್ಲಾ ಕಿರಿಕ್ ಮಾಡಿದರೂ ಬಸ್ ಚಾಲಕ ಮಾತ್ರ ಸಹನೆ ಕಳೆದುಕೊಂಡಿಲ್ಲ. ಸಮಾಧಾನವಾಗಿಯೇ ಬಸ್ ಚಲಾಯಿಸಿದ್ದಾರೆ.

ಬೈಕ್ ಸವಾರನ ಹುಂಬತನಕ್ಕೆ ಕೆಲ ಪ್ರಯಾಣಿಕರು ನಕ್ಕು ಸುಮ್ಮನಾಗಿದ್ದರೆ, ಇನ್ನೂ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://youtu.be/CD-ZHjuER_c

Comments

Leave a Reply

Your email address will not be published. Required fields are marked *