ಸರಳ ಬಹುಮತವೂ ಸಿಗಲ್ಲ, ಗುಜರಾತ್‍ನಲ್ಲಿ ನಮಗೆ ಸೋಲಾಗಲಿದೆ: ಬಿಜೆಪಿ ರಾಜ್ಯಸಭಾ ಸದಸ್ಯ

ಪುಣೆ: ಗುಜರಾತ್ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಎಕ್ಸಿಟ್ ಪೋಲ್ ಸಮೀಕ್ಷೆಗಳು ಬಿಜೆಪಿ ಭರ್ಜರಿ ಜಯಗಳಿಸಲಿದೆ ಎಂದು ಹೇಳಿದರೆ, ಬಿಜೆಪಿಯ ರಾಜ್ಯ ಸಭಾ ಸದಸ್ಯ ಸಂಜಯ್ ಕಾಕಡೆ ಮಾತ್ರ ನಮ್ಮ ಪಕ್ಷ ಸೋಲಲಿದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಗುಜರಾತ್ ಚುನಾವಣೆಯಲ್ಲಿ ನಮ್ಮ ಪಕ್ಷವು ಸ್ಪಷ್ಟ ಬಹುಮತ ಪಡೆಯುವುದಿರಲಿ, ಸರ್ಕಾರ ರಚನೆ ಮಾಡಲು ಬೇಕಾದ ಸರಳ ಬಹುಮತವನ್ನು ಪಡೆಯುವುದಿಲ್ಲ. ಕಾಂಗ್ರೆಸ್ ಸ್ಪಷ್ಟ ಬಹುಮತವನ್ನು ಪಡೆಯಲಿದೆ ಎಂದು ಅವರು ಹೇಳಿದ್ದಾರೆ.

ಒಂದು ವೇಳೆ ಪಕ್ಷವು ಗುಜರಾತ್‍ನಲ್ಲಿ ಬಹುಮತ ಪಡೆದು ಅಧಿಕಾರ ವಹಿಸಿಕೊಂಡರೆ, ಅದು ಕೇವಲ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯೇ ಹೊರತು ಬೇರೆ ಯಾವುದೇ ಕಾರಣದಿಂದ ಅಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಗುಜರಾತ್ ರಾಜ್ಯಸಭಾ ಸದಸ್ಯರಾಗಿರುವ ಕಾಕಡೆ ಅವರ ನೇತೃತ್ವದ ತಂಡವು ಚುನಾವಣೆ ಸಮೀಕ್ಷೆ ನಡೆಸಿದ್ದು, ಈ ಸಮೀಕ್ಷೆ ಆಧಾರ ಮೇಲೆ ಅವರು ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಅಲ್ಲದೇ ಗುಜರಾತ್ ನಲ್ಲಿ ಆಡಳಿತ ವಿರೋಧಿ ಅಲೆ ಇರುವುದೇ ಪಕ್ಷ ಸೋಲಿಗೆ ಪ್ರಮುಖ ಕಾರಣವಾಗಲಿದೆ ಎಂದು ತಿಳಿಸಿದ್ದಾರೆ.

ಸ್ವತಂತ್ರ್ಯ ಪಡೆದ ನಂತರ ಗುಜರಾತ್ ನಲ್ಲಿ ಬಿಜೆಪಿ ಸುಮಾರು 22 ವರ್ಷಗಳ ಕಾಲ ಆಡಳಿತ ನಡೆಸಿದೆ. ಪಶ್ಚಿಮ ಬಂಗಾಳ ಹೊರತು ಪಡಿಸಿ ದೇಶದ ಬೇರಾವುದೇ ರಾಜ್ಯದಲ್ಲಿ ಒಂದೇ ಪಕ್ಷ 25 ವರ್ಷಗಳ ಕಾಲ ಆಡಳಿತ ನಡೆಸಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಗುಜರಾತ್, ಹಿಮಾಚಲದಲ್ಲಿ ಮೋದಿ, ಶಾ ಮುಂದೆ ಕಾಂಗ್ರೆಸ್ ಧೂಳೀಪಟ: ಟುಡೇಸ್ ಚಾಣಕ್ಯ

ಚುನಾವಣೆ ಪ್ರಚಾರದ ವೇಳೆ ಗುಜರಾತ್ ನ ಯಾವುದೇ ನಾಯಕರು ಸಹ ಅಭಿವೃದ್ಧಿಯ ಅಂಶಗಳ ಆಧಾರದ ಮೇಲೆ ಮಾತನಾಡಿಲ್ಲ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸರ್ಕಾರ ಉದ್ಯೋಗ ಸೃಷ್ಟಿಗೆ ನೀಡಿದ ಕ್ರಮಗಳ ಕುರಿತು ತಿಳಿಸಿಲ್ಲ. ಕೇವಲ ವಿರೋಧಿ ಪಕ್ಷಗಳನ್ನು ಮಾತ್ರ ಗುರಿಯಾಗಿಸಿಕೊಂಡು, ಭಾವನಾತ್ಮಕವಾಗಿ ಮತದಾರರಲ್ಲಿ ಮನವಿ ಮಾಡಿ ಪ್ರಚಾರ ನಡೆಸಲಾಗಿದೆ ಎಂದು ಅವರು ಆರೋಪಿಸಿದರು. ಇದನ್ನೂ ಓದಿ: Exit Poll: ಗುಜರಾತ್, ಹಿಮಾಚಲದಲ್ಲಿ ಮೋದಿ, ಶಾ ‘ಓಖಿ’

Comments

Leave a Reply

Your email address will not be published. Required fields are marked *