ಮಂತ್ರಿಮಾಲ್‍ನಲ್ಲಿ ಮಹಿಳೆ ತಲೆ ಮೇಲೆ ಬಿತ್ತು ಬೃಹತ್ ಬೋರ್ಡ್ – ರಕ್ತ ಸೋರುತ್ತಿದ್ರೂ ಆಸ್ಪತ್ರೆಗೆ ಸೇರಿಸದ ಸಿಬ್ಬಂದಿ

ಬೆಂಗಳೂರು: ಮಂತ್ರಿಮಾಲ್‍ನಲ್ಲಿ ಮತ್ತೆ ಎಡವಟ್ಟಾಗಿದೆ. ಶಾಪಿಂಗ್‍ಗೆ ಹೋಗಿದ್ದ ಮಹಿಳೆ ಮೇಲೆ ಬೃಹತ್ ಬೋರ್ಡ್ ಬಿದ್ದ ಘಟನೆ ಗುರುವಾರ ರಾತ್ರಿ ನಡೆದಿದೆ.

ಯಲಹಂಕದ ಗುಣಶೀಲ ಎಂಬವರು ಮಾಲ್‍ಗೆ ಹೋಗಿದ್ದಾಗ ಬಟ್ಟೆಗಳ ಆಫರ್ ಪ್ರದರ್ಶನದ ಬೃಹತ್ ಬೋರ್ಡ್ ಅವರ ತಲೆಯ ಮೇಲೆ ಬಿದ್ದಿದೆ. ಇದರ ಪರಿಣಾಮ ಗುಣಶೀಲ ಅವರ ತಲೆಗೆ ಗಾಯವಾಗಿದ್ದು, ಏಳು ಸ್ಟಿಚ್ ಹಾಕಲಾಗಿದೆ.

 

ಘಟನೆ ನಡೆದು ರಕ್ತ ಸೋರುತ್ತಿದ್ದರೂ ಮಂತ್ರಿ ಮಾಲ್‍ನವರು ಪ್ರಥಮ ಚಿಕಿತ್ಸೆ ಮಾಡಿ ಬಿಟ್ಟಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗದೇ ಅಮಾನವೀಯತೆ ಮೆರೆದಿದ್ದಾರೆ. ತಮ್ಮ ಕಡೆಯಿಂದ ತಪ್ಪಾಗಿದ್ರೂ ಮುಚ್ಚಿಕೊಳ್ಳುವ ಯತ್ನ ನಡೆಸಿದ್ದಾರೆ.

 

ನಂತರ ಗುಣಶೀಲ ಅವರ ಪತಿ ಸ್ಥಳಕ್ಕೆ ಬಂದು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಗುಣಶೀಲ ಅವರ ತಲೆಯ ಮುಂಭಾಗಕ್ಕೆ ಏಟು ಬಿದ್ದಿದ್ದು ಎರಡು ದಿನ ಬಿಟ್ಟು ಎಂಆರ್‍ಐ ಮಾಡಿಸೋದಕ್ಕೆ ವೈದ್ಯರು ಸೂಚಿಸಿದ್ದಾರೆ ಅಂತ ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *