ಬೆಂಗಳೂರು: ನಸುಕಿನ ಜಾವದಲ್ಲಿ ಕಂಟೈನರ್ ಲಾರಿಯೊಂದು ಹೊತ್ತಿ ಉರಿದ ಪರಿಣಾಮ ಚಾಲಕ ಸಜೀವ ದಹನವಾಗಿರುವ ಘಟನೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ದೊಡ್ಡೇರಿ ಗ್ರಾಮದ ಬಳಿ ನಡೆದಿದೆ.
ಘಟನೆಯಲ್ಲಿ ರಾಜಸ್ಥಾನ ಮೂಲದ ಲಾರಿ ಚಾಲಕ ಸುರೆಂದರ್ ಸಾವನ್ನಪ್ಪಿದ್ದಾರೆ. ರಾತ್ರಿ ಪಾರ್ಕಿಂಗ್ ಲಾಟ್ ನಲ್ಲಿ ಲಾರಿ ನಿಲ್ಲಿಸಿದ್ದ ಸುರೆಂದರ್, ಮಲಗುವ ಮುನ್ನ ಸೊಳ್ಳೆ ಬತ್ತಿ ಹಚ್ಚಿಕೊಂಡು ಮಲಗಿದ್ದಾರೆ. ಸೊಳ್ಳೆ ಬತ್ತಿಯ ಕಿಡಿಯಿಂದ ಲಾರಿ ಧಗಧಗನೆ ಹೊತ್ತಿ ಉರಿದಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.













Leave a Reply