ಬೆಂಗಳೂರು: ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಆರೋಪದ ಮೇಲೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಬಂಧನವಾದ ಬೆನ್ನಲ್ಲೇ ಅವರ 2ನೇ ಪತ್ನಿ ನಾಪತ್ತೆಯಾಗಿದ್ದಾರೆ.

ಬೆಂಗಳೂರು ಸಿಸಿಬಿ ಪೊಲೀಸರಿಂದ ಎರಡನೇ ಪತ್ನಿ ಯಶೋಮತಿ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಯಾವುದೇ ಕ್ಷಣದಲ್ಲಿ ಸಿಸಿಬಿ ವಿಚಾರಣೆ ಹಾಜರಾಗುವಂತೆ ಹೇಳೋ ಸಾಧ್ಯತೆ ಇದ್ದು, ಹೆಗ್ಗರವಳ್ಳಿ ಜೊತೆ ನಂಟಿನ ಬಗ್ಗೆ ಮಾಹಿತಿ ಸಂಗ್ರಹಿಸುವ ನಿರೀಕ್ಷೆ ಇದೆ. ರವಿ ಬೆಳಗೆರೆ ಬೆದರಿಕೆ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸಲಿದ್ದು, ಮ್ಯಾಜಿಸ್ಟ್ರೇಟ್ ಮುಂದೆ ಐಪಿಸಿ 164 ಅನ್ವಯ ಯಶೋಮತಿಯ ಸ್ವಇಚ್ಛಾ ಹೇಳಿಕೆ ಪಡೆಯುವ ಸಾಧ್ಯತೆ ಇದೆ ಎಂದು ಪಬ್ಲಿಕ್ ಟಿವಿಗೆ ಮೂಲಗಳಿಂದ ಮಾಹಿತಿ ಸಿಕ್ಕಿದೆ.

ಆದ್ರೆ ಶುಕ್ರವಾರ ರಾತ್ರಿಯಿಂದ 2ನೇ ಪತ್ನಿ ಯಶೋಮತಿ ನಾಪತ್ತೆಯಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರೋ ಮನೆಯಲ್ಲಿ ಸದ್ಯ ಯಶೋಮತಿ ಇಲ್ಲ. ತನ್ನ ಫೇಸ್‍ಬುಕ್ ಅಕೌಂಟ್ ಕೂಡ ಕ್ಲೋಸ್ ಮಾಡಿದ್ದಾರೆ. ಅಲ್ಲದೆ ಯಶೋಮತಿ ಯಾವುದೇ ಫೋನ್ ಕರೆಗಳನ್ನ ಸ್ವೀಕರಿಸುತ್ತಿಲ್ಲ.

ಸುನೀಲ್ ಹೆಗ್ಗರವಳ್ಳಿ ಹಾಗೂ ಯಶೋಮತಿ ನಡುವೆ ಅನೈತಿಕ ಸಂಬಂಧವಿತ್ತು. ಈ ಬಗ್ಗೆ ಮನೆ ಕೆಲಸದಾಕೆ ರವಿ ಬೆಳಗೆರೆಗೆ ಮಾಹಿತಿ ನೀಡಿದ್ದರು. ಈ ಮಧ್ಯೆ ಒಂದು ಬಾರಿ ರವಿ ಬೆಳಗೆರೆ ಮಧ್ಯರಾತ್ರಿ ಮನೆಗೆ ಬಂದಾಗ ಸುನೀಲ್ ಓಡಿಹೋಗಿದ್ದರು ಎಂಬ ಮಾತುಗಳೂ ಕೂಡ ಕೇಳಿಬಂದಿದೆ. ಇದೇ ಹಿನ್ನೆಲೆಯಲ್ಲಿ ರವಿ ಬೆಳಗೆರೆ ಸುನೀಲ್ ಹತ್ಯೆಗೆ ಸುಪಾರಿ ಕೊಟ್ಟಿದ್ದರು ಎಂದು ತಿಳಿದುಬಂದಿದೆ.
https://www.youtube.com/watch?v=lgEoaxQ1l44
https://www.youtube.com/watch?v=86k-IW3-boE
https://www.youtube.com/watch?v=tvAkOpM6ZZo
https://www.youtube.com/watch?v=p0Orve2DpiM














Leave a Reply