ಈ ಬಾಲಿವುಡ್ ನಟಿ ಮೇಲೆ ಪ್ರಭಾಸ್‍ಗೆ ಕ್ರಷ್ ಅಂತೆ!

ಹೈದರಾಬಾದ್: `ಬಾಹುಬಲಿ’ ಸಿನಿಮಾ ಸೂಪರ್ ಡೂಪರ್ ಹಿಟ್ ಆದ ಬಳಿಕ ಇಡೀ ಭಾರತದಲ್ಲಷ್ಟೇ ಅಲ್ಲ ವಿಶ್ವದಾದ್ಯಂತ ಪ್ರಭಾಸ್ ಸೆನ್ಸೇಷನಲ್ ಸ್ಟಾರ್ ಆಗಿದ್ದಾರೆ.

ಪ್ರಭಾಸ್ ಕಂಡರೆ ಪ್ರಾಣ ಬಿಡುವ ಹುಡುಗಿಯರಂತೂ ಲೆಕ್ಕವಿಲ್ಲದಷ್ಟು ಮಂದಿ ಇದ್ದಾರೆ. ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ನಡುವಿನ ಕೆಮಿಸ್ಟ್ರಿ ಬಗ್ಗೆ ಗಾಸಿಪ್ ಕೂಡ ಆಗಾಗ ಕೇಳಿ ಬರುತ್ತಲೇ ಇದೆ. ಆದರೆ ಇಂತಾ ಸೂಪರ್ ಸ್ಟಾರ್ ನ ಹೃದಯ ಕದ್ದಿರೋದು ಬಾಲಿವುಡ್ ನಟಿ.

90ರ ದಶಕದ ಬಾಲಿವುಡ್ ಬ್ಯೂಟಿ ರವೀನಾ ಟಂಡನ್ ಅಂದರೆ ಪ್ರಭಾಸ್ ಗೆ ತುಂಬಾ ಅಚ್ಚುಮೆಚ್ಚು. ಅಷ್ಟೇ ಅಲ್ಲ ಅವರ ಮೇಲೆ ಪ್ರಭಾಸ್ ಗೆ ಸೀಕ್ರೆಟ್ಟಾಗಿ ಕ್ರಷ್ ಕೂಡ ಆಗಿತ್ತಂತೆ. ಹಾಗಂತ ಸ್ವತಃ ಪ್ರಭಾಸ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ನಾನು ರವೀನಾ ಅವರ ದೊಡ್ಡ ಅಭಿಮಾನಿ. ನಾನು ಅವರ `ಅಂದಾಝ್ ಅಪ್ನಾ ಅಪ್ನಾ’ ಸಿನಿಮಾದಲ್ಲಿ “ಎಲೊ ಜಿ ಸನಮ್” ಹಾಡನ್ನು ನೋಡಿ ತುಂಬಾ ಇಷ್ಟ ಪಟ್ಟೆ ಎಂದು ಪ್ರಭಾಸ್ ಹೇಳಿದ್ದಾರೆ.

ರವೀನಾ ಪತಿ ಅನಿಲ್ ಥದಾನಿ ಅವರು ಬಾಹುಬಲಿ ಸಿನಿಮಾಗಳ ವಿತರಕರಾಗಿದ್ದರು. ಪ್ರಸ್ತುತ ಬಾಹುಬಲಿ ಸಿನಿಮಾದ ನಟರು ಮತ್ತು ಚಿತ್ರತಂಡದವರು ಸ್ನೇಹಿತರಾಗಿದ್ದು, ಅವರದ್ದೆ ಒಂದು ಗುಂಪು ಇದೆ. ಇವರೆಲ್ಲರೂ ಮುಂಬೈಗೆ ಹೋದರೆ ಅನಿಲ್ ಮತ್ತು ರವೀನಾ ಅವರನ್ನು ಭೇಟಿ ಮಾಡಿ ಬರುತ್ತಾರೆ.

ಪ್ರಭಾಸ್ ತಮ್ಮ ಮುಂದಿನ ಚಿತ್ರವಾದ ಸುಜೀತ್ ನಿರ್ದೇಶನದ `ಸಾಹೋ’ ಶೂಟಿಂಗ್‍ನಲ್ಲಿ ಬ್ಯುಸಿ ಆಗಿದ್ದಾರೆ. ಸಾಹೋ ಸಿನಿಮಾ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದ್ದು, ಮುಂದಿನ ವರ್ಷ 2018 ಕ್ಕೆ ತೆರೆಕಾಣುವ ಸಾಧ್ಯತೆ ಇದೆ.

https://www.instagram.com/p/BZsvmP-Ammk/

https://www.instagram.com/p/BZtKgD2l12G/

 

Comments

Leave a Reply

Your email address will not be published. Required fields are marked *