ಹೆಸ್ರು, ಮನೆದೇವ್ರು ಒಂದೇ ಆಗಿರೋ ಸಿಎಂ ಅವರೇ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು- ಸಿ.ಟಿ ರವಿ

ಚಿಕ್ಕಮಗಳೂರು: ಮುಖ್ಯಮಂತ್ರಿಗಳೇ ನಿಮ್ಮ ಹೆಸರು ಸಿದ್ದರಾಮಯ್ಯ, ಮನೆದೇವರು ಸಿದ್ದರಾಮೇಶ್ವರ. ದತ್ತಪೀಠವನ್ನ ನೀವೇ ಹಿಂದೂಗಳಿಗೆ ಒಪ್ಪಿಸಬೇಕು ಅಂತ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಆಗ್ರಹಿಸಿದ್ದಾರೆ.

ದತ್ತಜಯಂತಿ ಅಂಗವಾಗಿ ಚಿಕ್ಕಮಗಳೂರಿನ ನಾರಾಯಣಪುರದಲ್ಲಿ ಮನೆ-ಮನೆಗೆ ತೆರಳಿ ಪಡಿ ಸಂಗ್ರಹ ಮಾಡಿದ ಬಳಿಕ ಮಾತನಾಡಿದ ಅವರು, ಓಟ್ ಬ್ಯಾಂಕ್ ರಾಜಕಾರಣ ಮಾಡೋದು ಬಿಟ್ಟು ಕಾನೂನಾತ್ಮಕ ಹಾಗೂ ದಾಖಲೆಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಿ. ನಾವ್ಯಾರು ದತ್ತಪೀಠವನ್ನ ಗುತ್ತೆಗೆ ಪಡೆದುಕೊಂಡಿಲ್ಲ. ಸಿಎಂ ಸಿದ್ದರಾಮಯ್ಯನವರೇ ಮುಂದೆ ನಿಂತು ದತ್ತಜಯಂತಿಯನ್ನ ಆಚರಿಸಬೇಕಿತ್ತು ಅಂತ ಹೇಳಿದ್ರು.

ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಒಂದೇ ತಿಂಗಳಲ್ಲಿ ದತ್ತಪೀಠದ ವಿವಾದವನ್ನ ಬಗೆಹರಿಸುತ್ತೇವೆ. ದತ್ತಪೀಠವನ್ನ ಹಿಂದೂಗಳಿಗೆ ನೀಡಿ. ಬಾಬಾಬುಡನ್ ದರ್ಗಾವನ್ನ ಮುಸ್ಲಿಮರಿಗೆ ಒಪ್ಪಿಸುತ್ತೇವೆ ಎಂದರು. ಎರಡೂ ಸಮುದಾಯದವರಿಗೂ ಪ್ರಾರ್ಥನೆ ಸಲ್ಲಿಸೋದಕ್ಕೆ ಎರಡೂ ಕಡೆಯೂ ಪ್ರಾರ್ಥನಾ ಮಂದಿರವನ್ನ ನಿರ್ಮಿಸೋದಾಗಿ ಹೇಳಿದ್ರು.

Comments

Leave a Reply

Your email address will not be published. Required fields are marked *