ದಿಢೀರ್ 26 ಕೆ.ಜಿ ತೂಕವನ್ನು ಧ್ರುವ ಸರ್ಜಾ ಇಳಿಸಿದ್ದರ ರಹಸ್ಯ ಇಲ್ಲಿದೆ

ಬೆಂಗಳೂರು: ಸ್ಯಾಂಡಲ್‍ವುಡ್‍ನ ಆ್ಯಕ್ಷನ್ ಕಿಂಗ್ ನಟ ಧ್ರುವ ಸರ್ಜಾ ಹೊಸ ಸವಾಲನ್ನು ಸ್ವೀಕರಿಸಿ ಎದುರಿಸಲು ಸಿದ್ಧರಾಗಿದ್ದಾರೆ.

`ಭರ್ಜರಿ’ ಸಿನಿಮಾದ ನಂತರ ಧ್ರುವ ಯಾವ ಸಿನಿಮಾ ಮಾಡುತ್ತಾರೆ ಎಂಬ ಅಭಿಮಾನಿಗಳ ಪ್ರಶ್ನೆಗೆ ಉತ್ತರ ಸಿಕ್ಕಿದೆ. ನಂದಕಿಶೋರ್ ನಿರ್ದೇಶನ ಮಾಡುತ್ತಿರುವ `ಪೊಗರು’ ಸಿನಿಮಾಕ್ಕೆ ಧ್ರುವ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ಸದ್ಯಕ್ಕೆ ಪೊಗರು ಚಿತ್ರೀಕರಣಕ್ಕೆ ಸಜ್ಜಾಗುತ್ತಿರುವ ನಿರ್ದೇಶಕರು ನಟನಿಗೆ ಒಂದು ಹೊಸ ಚಾಲೆಂಜ್ ಕೊಟ್ಟಿದ್ದಾರೆ. ಧ್ರುವ ಕೆಲಸದ ವಿಚಾರ ಬಂದರೆ ತುಂಬಾ ಶ್ರದ್ಧೆಯಿಂದ ಇರುತ್ತಾರೆ. ಚಿತ್ರದ ಪಾತ್ರಕ್ಕಾಗಿ 30 ಕೆಜಿ ತೂಕ ಇಳಿಸಿಕೊಳ್ಳಲು ನಿರ್ದೇಶಕರು ಸೂಚಿಸಿದ್ದರು. ಅದಕ್ಕಾಗಿ ಧ್ರುವ ವರ್ಕ್ ಔಟ್ ಮಾಡಿ ಬರೋಬ್ಬರಿ 26 ಕೆ.ಜಿ ತೂಕವನ್ನು ಕಡಿಮೆ ಮಾಡಿಕೊಂಡಿದ್ದಾರೆ.

ಪೊಗರು ಸಿನಿಮಾದ ಫಸ್ಟ್ ಆಫ್ ನಲ್ಲಿ ಧ್ರುವ 8ನೇ ತರಗತಿ 12 ವರ್ಷದ ಬಾಲಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದ್ದರಿಂದ ಬಾಲಕನಂತೆ ಧ್ರುವ ಲುಕ್ ಬದಲಾಯಿಸಲು ನಿರ್ದೇಶಕ ನಂದಕಿಶೋರ್ ಮುಂದಾಗಿದ್ದಾರೆ. ಆದ್ದರಿಂದ ನಿರ್ದೇಶಕರು 30 ಕೆ.ಜಿ ತೂಕ ಕಡಿಮೆ ಮಾಡಿಕೊಳ್ಳಿ ಎಂದಾಕ್ಷಣ ಯಾವುದೇ ವಿರೋಧವಿಲ್ಲದೆ ಒಪ್ಪಿಗೆ ಸೂಚಿಸಿದ್ದು, ಈಗಾಗಲೇ 26 ಕೆಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ.

ಧ್ರುವ ಇನ್ನು ಕೆಲವೇ ದಿನಗಳಲ್ಲಿ ನಾಲ್ಕು ಕೆಜಿ ತೂಕ ಇಳಿಸಿಕೊಳ್ಳಲಿದ್ದಾರೆ. ನಂತರ ತೂಕ ಕಡಿಮೆಯಾದ ತಕ್ಷಣ ಚಿತ್ರೀಕರಣವನ್ನು ಪ್ರಾರಂಭ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.

Comments

Leave a Reply

Your email address will not be published. Required fields are marked *