ಉಡುಪಿ: ಅಯೋಧ್ಯೆಯಲ್ಲಿ ಹಿಂದೂಗಳ ಬಹುವರ್ಷದ ಕನಸಿನ ರಾಮಮಂದಿರ ನಿರ್ಮಾಣಕ್ಕೆ ಧರ್ಮಸಂಸದ್ ವೇದಿಕೆ ಸಜ್ಜಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಸಾವಿರಾರು ಸಂತರು ಉಡುಪಿಗೆ ಹೊರಟು ಬಂದಿದ್ದಾರೆ.
ಧರ್ಮ ಸಂಸದ್ ಅಧಿವೇಶನಕ್ಕೂ ಮೊದಲು ಆರ್ ಎಸ್ಎಸ್ ಸಂಘ ಚಾಲಕ ಮೋಹನ್ ಭಾಗವತ್ ಮತ್ತು ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಮಹತ್ವದ ಮಾತುಕತೆ ಮಾಡಿದ್ದಾರೆ.

ರಾತ್ರಿ 11 ಗಂಟೆ ಸುಮಾರಿಗೆ ಉಡುಪಿಗೆ ಬಂದ ಭಾಗವತ್ ನೇರ ಮಠಕ್ಕೆ ಬಂದು ವಿಶ್ವೇಶತೀರ್ಥರ ಜೊತೆ ಸುಮಾರು 20 ನಿಮಿಷಗಳ ಕಾಲ ಗೌಪ್ಯ ಮಾತುಕತೆಯಲ್ಲಿ ನಡೆಸಿದ್ರು. ಈ ಮಹತ್ವದ ಮಾತುಕತೆಯ ನಂತರ ಪೇಜಾವರಶ್ರೀ ಮತ್ತು ಮೋಹನ್ ಭಾಗವತ್ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇನ್ನೆರಡು ದಿನಗಳಲ್ಲಿ ಕಾದು ನೋಡಿ ಎಂದಷ್ಟೇ ಹೇಳಿದ್ರು.
ಇದನ್ನೂ ಓದಿ: ಧರ್ಮ ಸಂಸದ್ ನಲ್ಲಿ ರಾಮಮಂದಿರ ಬಗ್ಗೆ ಚರ್ಚೆ ಆಗುತ್ತಾ: ತೊಗಾಡಿಯಾ ಹೇಳಿದ್ದು ಹೀಗೆ
ಆದ್ರೆ ಇಂದು ನಡೆಯುವ ಚರ್ಚೆ, ಆರ್ ಎಸ್ ಎಸ್ ಈ ಬಗ್ಗೆ ತೆಗೆದುಕೊಳ್ಳಬಹುದಾದ ನಿರ್ಧಾರ-ಸಂತರು ಸರ್ಕಾರದ ಮುಂದೆ ಯಾವೆಲ್ಲಾ ಅಂಶಗಳನ್ನು ಇಡಬೇಕು, ರಾಮ ಮಂದಿರ ನಿರ್ಮಾಣ ಕುರಿತಂತೆ ಮುಂದಿನ ದಾರಿಗಳೇನು ಎಂಬ ಬಗ್ಗೆ ಚರ್ಚೆ ನಡೆದಿದೆ ಎನ್ನಲಾಗ್ತಿದೆ.
ಏನಿದು ಧರ್ಮ ಸಂಸದ್? ಈ ಬಾರಿ ಏನು ಚರ್ಚೆ ಆಗುತ್ತೆ? ಕರ್ನಾಟಕದ ಮೇಲೆ ಪರಿಣಾಮ ಬೀರುತ್ತಾ? ಇಲ್ಲಿದೆ ಪೂರ್ಣ ಮಾಹಿತಿ… https://t.co/BT3OlRXY1Z#DharmaSansad #VHP #Udupi #PejawaraShree #Hindu #YogiAdityanath pic.twitter.com/ZzIQuBpQH4
— PublicTV (@publictvnews) November 23, 2017
ಕೃಷ್ಣ ಮಠದ ಸಂಪ್ರದಾಯ ಉಲ್ಲಂಘನೆ ಮಾಡಿದ್ರಾ ಪೇಜಾವರ ಶ್ರೀ? https://t.co/luYaI9w6rS#DharmaSansad #VHP #Udupi #PejawaraShree #Hindu pic.twitter.com/f8Xq1zMeyZ
— PublicTV (@publictvnews) November 23, 2017








Leave a Reply