ರಸ್ತೆ ದಾಟಲಾಗದೆ ಪರದಾಡ್ತಿದ್ದ ವೃದ್ಧೆ- ಈ ಕಾರ್ ಚಾಲಕ ಏನು ಮಾಡಿದ್ರು ನೋಡಿ

ಬೀಜಿಂಗ್: ಹೆಚ್ಚಿನ ಟ್ರಾಫಿಕ್ ಇರೋ ಕಡೆ ರಸ್ತೆ ದಾಟೋದು ಅಂದ್ರೆ ಸುಲಭದ ಮಾತಲ್ಲ. ಅದರಲ್ಲೂ ಮಕ್ಕಳೋ ವೃದ್ಧರೋ ಇದ್ರೆ ರಸ್ತೆ ದಾಟೋಕಾಗದೆ ಪರಾದಾಡ್ತಾರೆ. ಇನ್ನು ಕೆಲವು ವಾಹನ ಸವಾರರು ರಸ್ತೆ ದಾಟಲು ಸಹಾಯವಾಗ್ಲಿ ಅಂತ ವಾಹನವನ್ನ ನಿಲ್ಲಿಸಿ ನಂತರ ಮುಂದೆ ಹೋಗ್ತಾರೆ. ಆದ್ರೆ ಇಲ್ಲೊಬ್ಬ ವೃದ್ಧೆ ರಸ್ತೆ ದಾಟೋಕಾಗದೆ ಪರಾದಾಡ್ತಿದ್ದಾಗ ಈ ವಾಹನ ಸವಾರ ಮಾಡಿದ್ದೇನು ಅಂತ ನೋಡಿದ್ರೆ ನಿಜಕ್ಕೂ ನಿಮ್ಮ ಮನಸ್ಸು ಕರಗುತ್ತೆ.

ವೃದ್ಧೆಯೊಬ್ಬರು ರಸ್ತೆ ದಾಟಲೆಂದು ಝೀಬ್ರಾ ಕ್ರಾಸಿಂಗ್ ಬಳಿ ಕಾಯುತ್ತಿದ್ರು. ಆದ್ರೆ ಎಷ್ಟು ಹೊತ್ತಾದ್ರೂ ವಾಹನಗಳು ನಿಲ್ಲಲೇ ಇಲ್ಲ. ಹೀಗಾಗಿ ಹಳದಿ ಬಣ್ಣದ ಕಾರಿನ ಚಾಲಕರೊಬ್ಬರು ಸಹಾಯ ಮಾಡಲು ಮುಂದಾದ್ರು. ವೃದ್ಧೆ ರಸ್ತೆ ದಾಟಲಿ ಅಂತ ಕಾರ್ ನಿಲ್ಲಿಸಿ ಕಾಯುತ್ತಿದ್ರು. ಆದ್ರೆ ಇತರೆ ಕಾರುಗಳು ಮಾತ್ರ ನಿಲ್ಲಿಸದೇ ಮುಂದೆ ಸಾಗಿದ್ವು. ವೃದ್ಧೆ ಕೈ ಅಡ್ಡ ಮಾಡಿದ್ರೂ ವಾಹನ ಸವಾರರು ಅದನ್ನ ಲೆಕ್ಕಿಸದೇ ಮುಂದೆ ಹೋದ್ರು.

ಹೀಗಾಗಿ ವೃದ್ಧೆ ರಸ್ತೆ ದಾಟಲು ಸಾಧ್ಯವಾಗಲೇ ಇಲ್ಲ. ಕೊನೆಗೆ ಆ ಕಾರ್ ಚಾಲಕ ತನ್ನ ಕಾರನ್ನ ರಸ್ತೆಗೆ ಅಡ್ಡ ನಿಲ್ಲಿಸಿ ಟ್ರಾಫಿಕ್ ಬ್ಲಾಕ್ ಮಾಡಿದ್ರು. ನಂತರ ವೃದ್ಧೆಯಷ್ಟೇ ಅಲ್ಲದೆ ಮಗುವೊಂದನ್ನ ಟ್ರಾಲಿಯಲ್ಲಿ ಕರೆದುಕೊಂಡು ಹೋಗ್ತಿದ್ದವರೂ ಕೂಡ ಸುರಕ್ಷಿತವಾಗಿ ಮತ್ತೊಂದು ಬದಿಗೆ ಹೋದ್ರು.

ಈ ವಿಡಿಯೋ ನವೆಂಬರ್ 15 ರಂದು ಚೀನಾದ ಜಿನ್‍ಹುವಾದ ಝೀಜಿಯಾಂಗ್‍ನಲ್ಲಿ ರೆಕಾರ್ಡ್ ಆಗಿದೆ. ಇದನ್ನ ಇಲ್ಲಿನ ಮಾಧ್ಯಮವೊಂದು ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದೆ. ಈವರೆಗೆ ಈ ವಿಡಿಯೋ 91 ಸಾವಿರಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. 4.2 ಸಾವಿರಕ್ಕೂ ಹೆಚ್ಚು ರಿಯಾಕ್ಷನ್ಸ್ ಪಡೆದಿದ್ದು, 290 ಬಾರಿ ಶೇರ್ ಆಗಿದೆ. ವೃದ್ಧೆಗೆ ಸಹಾಯ ಮಾಡಿದ ಕಾರ್ ಚಾಲಕನ ಬಗ್ಗೆ ಜನರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

https://www.facebook.com/PeoplesDaily/videos/1731252540259889/

Comments

Leave a Reply

Your email address will not be published. Required fields are marked *