ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಟೀಂ ವೇಗಿ ಭುವನೇಶ್ವರ್ ಕುಮಾರ್

ನವದೆಹಲಿ: ಟೀಂ ಇಂಡಿಯಾ ವೇಗಿ ಭುವನೇಶ್ವರ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು, ತಮ್ಮ ಗೆಳತಿ ನೂಪುರ್ ನಗರ್ ಜೊತೆ ನವೆಂಬರ್ 23 ರಂದು ಮದುವೆಯಾಗಲಿದ್ದಾರೆ. ಭುವನೇಶ್ವರ್ ಗೆಳತಿ ನೂಪುರ್ ಮೂಲತಃ ಗ್ರೇಟರ್ ನೊಯ್ಡಾ ನಿವಾಸಿಯಾಗಿದ್ದು, ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಈ ಕುರಿತಂತೆ ಭುವಿ ತಂದೆ ಕಿರಣ್ ಪಾಲ್ ಸಿಂಗ್ ಮಾಹಿತಿ ನೀಡಿದ್ದು, ಮೀರತ್‍ನಲ್ಲಿ ಮದುವೆ ನಡಯಲಿದೆ. ಮದುವೆ ಸಮಾರಂಭದಲ್ಲಿ ಕುಟುಂಬ ಸದಸ್ಯರು ಹಾಗೂ ಕೆಲ ಅಪ್ತ ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ನವೆಂಬರ್ 16 ರ ನಂತರ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ನಡೆಯಲಿರುವ ಕಾರಣ ನವೆಂಬರ್ 26 ಮತ್ತು 30 ರಂದು ಕ್ರಮವಾಗಿ ಬುಲಂದರ್ ಹಾಗೂ ದೆಹಲಿಯಲ್ಲಿ ಔತಣ ಕೂಟವನ್ನು ಏರ್ಪಸಿಲಾಗಿದೆ. ಈ ಸಮಾರಂಭದಲ್ಲಿ ಟೀಂ ಇಂಡಿಯಾ ಆಟಗಾರರು ಹಾಗೂ ಬಿಸಿಸಿಐ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಭುವಿ ತಮ್ಮ ಮದುವೆ ಸಮಾರಂಭದ ಕುರಿತು ಸಂತೋಷ ವ್ಯಕ್ತಪಡಿಸಿದ್ದು, ತಮ್ಮ ಗೆಳತಿ ನೂಪುರ್ ಜೊತೆಗಿರುವ ಸಂತೋಷದ ನೆನಪಿನ ಕ್ಷಣಗಳ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಶ್ರೀಲಂಕಾ ವಿರುದ್ಧದ 3 ಟೆಸ್ಟ್ ಪಂದ್ಯಗಳ ಸರಣಿಯು ನವೆಂಬರ್ 16 ರಿಂದ ಆರಂಭವಾಗಲಿದ್ದು, ಈ ಸರಣಿಗೆ ಭುವನೇಶ್ವರ್ ಆಯ್ಕೆಯಾಗಿದ್ದಾರೆ.

https://www.instagram.com/p/BZ4B2YtgNku/?hl=en&taken-by=imbhuvi

https://www.instagram.com/p/BZyRMHRggEQ/?hl=en&taken-by=imbhuvi

https://www.instagram.com/p/BHHbST1jOoq/?hl=en&taken-by=imbhuvi

https://www.instagram.com/p/BHMQYzajEYX/?hl=en&taken-by=imbhuvi

https://www.instagram.com/p/BBajqGpLKuP/?hl=en&taken-by=imbhuvi

https://www.instagram.com/p/qer6ULLKoo/?hl=en&taken-by=imbhuvi

Comments

Leave a Reply

Your email address will not be published. Required fields are marked *