ಕೇಂದ್ರದ ಬಗ್ಗೆ ಅಪಹಾಸ್ಯ ಮಾಡಲು ಮೋದಿಯವರಿಗೆ ನಾಚಿಗೆಯಾಗ್ಬೇಕು: ಡಿವಿಎಸ್ ಎಡವಟ್ಟು

ಮಂಗಳೂರು: ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಶುಕ್ರವಾರ ಬಳ್ಳಾರಿ ಸಂಸದ ಶ್ರೀರಾಮುಲು ಎಡವಟ್ಟು ಮಾಡಿದ್ದು, ಇದೀಗ ಇಂದು ಮತ್ತೆ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಖಾತೆಯ ಸಚಿವ ಡಿವಿ ಸದಾನಂದ ಗೌಡ ಅವರು ಎಡವಟ್ಟು ಮಾಡುವ ಮೂಲಕ ವಿರೋಧ ಪಕ್ಷದವರ ನಗೆಪಾಟಲಿಗೀಡಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ನಿನ್ನೆ ನಡೆದಿದ್ದು, ಇಂದು ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಸಮಾವೇಶ ನಡೆಯಿತು. ತಮ್ಮ ಭಾಷಣದ ವೇಳೆ ಕೇಂದ್ರ ಸಚಿವ ಡಿವಿ ಸದಾನಂದ ಗೌಡ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಕೇಂದ್ರದ ಬಗ್ಗೆ ಅಪಹಾಸ್ಯ ಮಾಡಲು ನರೇಂದ್ರ ಮೋದಿಯವರಿಗೆ ನಾಚಿಗೆಯಾಗಬೇಕು ಎಂದು ಹೇಳಿದರು.

ಇದನ್ನೂ ಓದಿ: ಯಡಿಯೂರಪ್ಪ, ಶೋಭಾ, ಸದಾನಂದ ಗೌಡರಿಂದ ಹಿಂದೂ ಕಾರ್ಯಕರ್ತರ ಕೊಲೆ:ಶ್ರೀರಾಮುಲು ಎಡವಟ್ಟು


ಬಳಿಕ ಈಶ್ವರಪ್ಪ ಮಾತನಾಡಿ, ಸಿದ್ದರಾಮಯ್ಯ ಮೈಯಲ್ಲಿ ಕನಕದಾಸರ ರಕ್ತ ಹರೀತಿಲ್ಲ. ಅವರ ಮೈಯಲ್ಲಿ ಟಿಪ್ಪುವಿನ ರಕ್ತ ಹರೀತಿದೆ. ಹಾಗಾಗಿ ಮೈಯನ್ನು ಕುಲುಕಿಸಿ ಟಿಪ್ಪು ಹೆಸರಲ್ಲಿ ಬೆಂಕಿ ಹಚ್ಚುತ್ತಿದ್ದಾರೆ. ಸಿದ್ರಾಮಯ್ಯ ತಮಗೆ ಟಿಪ್ಪು ಹೆಸರನ್ನೇ ಇಟ್ಟುಕೊಳ್ಳಲಿ. ಹಿಂದುಗಳ ಮುದ್ರಾಧಾರಣೆ, ತ್ರಿಶೂಲಧಾರಣೆಯನ್ನು ಹಿಂಸೆ ಎನ್ನುತ್ತಾರೆ. ತಾಕತ್ತಿದ್ದರೆ ಮುಸ್ಲಿಮರು ಮಾಡುವ ಸುನ್ನತ್ ನಿಲ್ಲಿಸಿ, ಅದು ಕೂಡ ಹಿಂಸೆಯೇ. ಸುನ್ನತ್ ನಿಷೇಧಿಸುತ್ತೀರಾ ಅಂತ ಸಿಎಂಗೆ ಈಶ್ವರಪ್ಪ ಪ್ರಶ್ನೆ ಹಾಕಿದ್ರು.

ಡಿಕೆಶಿ ಬಿಜೆಪಿಗೆ ಆಹ್ವಾನ ವದಂತಿ ವಿಚಾರದ ಬಗ್ಗೆ ಮಾತನಾಡಿದ ಅವರು, ಡಿಕೆಶಿಯಂತಹ ಭ್ರಷ್ಟರನ್ನು ಬಿಜೆಪಿ ಸೇರಿಸಲು ಸಾಧ್ಯವೇ ಇಲ್ಲ. ಸಿದ್ಧರಾಮಯ್ಯ, ಡಿಕೆಶಿ ಸಾಕಷ್ಟು ಸುಳ್ಳು ಹೇಳಿದ್ದಾರೆ. ಡಿಕೆಶಿಯಂತಹ ಭ್ರಷ್ಟರನ್ನು ಬಿಜೆಪಿ ತಗೊಳಲ್ಲ. ಇವರು ಪ್ರಭಾಕರ್ ಭಟ್ಟರನ್ನು ಬಂಧಿಸುವ ಉದ್ದೇಶ ಹೊಂದಿದ್ದರು. ಪ್ರಭಾಕರ್ ಭಟ್ ರೋಮ ಮುಟ್ಟಿದರೆ ರಾಜ್ಯದಲ್ಲಿ ಜನ ಸುಮ್ಮನಿರಲ್ಲ. ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಗೋಹತ್ಯಾ ನಿಷೇಧ ಕಾನೂನು ತರುತ್ತೇವೆ ಅಂತ ಹೇಳಿದ್ರು.

https://www.youtube.com/watch?v=paACKy7LMQs

Comments

Leave a Reply

Your email address will not be published. Required fields are marked *