ಸಿಂಹಗಳನ್ನ ಬೈಕ್‍ನಲ್ಲಿ ಚೇಸ್ ಮಾಡಿ ಮಜಾ ತಗೊಂಡ್ರು- ವಿಡಿಯೋ ವೈರಲ್

ಅಹಮದಾಬಾದ್: ಬೈಕ್ ಸವಾರರ ಗುಂಪೊಂದು ಗುಜರಾತ್‍ನ ಗಿರ್ ಅರಣ್ಯಧಾಮದಲ್ಲಿ ಸಿಂಹಗಳನ್ನ ಚೇಸ್ ಮಾಡಿರೋ ವಿಡಿಯೋ ವೈರಲ್ ಆಗಿದೆ.

ಘಟನೆಗೆ ಸಂಬಂಧಿಸಿದಂತೆ ನಾಲ್ವರಲ್ಲಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ನಾಲ್ವರು ಸಿಂಹಗಳು, ಸಿಂಹಿಣಿಗಳು ಹಾಗೂ ಮರಿಗಳನ್ನು ಬೈಕ್‍ನಲ್ಲಿ ಚೇಸ್ ಮಾಡಿದ್ದಾರೆ. ಒಂದು ಬೈಕಿನ ಲೈಸೆನ್ಸ್ ಪ್ಲೇಟ್ ವಿಡಿಯೋದಲ್ಲಿ ಕಾಣಿಸುತ್ತದೆ. ಸಿಂಹಗಳು ಬೈಕ್ ಸದ್ದಿಗೆ ಬೆದರಿ ಅಲ್ಲಿಂದ ದಿಕ್ಕಾಪಾಲಾಗಿ ಓಡಿವೆ. ಇದರ ವಿಡಿಯೋವನ್ನ ಬುಧವಾರದಂದು ಫೇಸ್‍ಬುಕ್‍ನಲ್ಲಿ ಹಂಚಿಕೊಳ್ಳಲಾಗಿತ್ತು.

ವನ್ಯಜೀವಿ ಅಧಿಕಾರಿಗಳು ಉಳಿದ ಆರೋಪಿಗಳ ಪತ್ತೆಗಾಗಿ ಹಾಗೂ ವಿಡಿಯೋದ ಮೂಲದ ಬಗ್ಗೆ ತಿಳಿಯಲು ಪ್ರಯತ್ನ ನಡೆಸಿದ್ದಾರೆ.

ಇಂದು ರಾಜ್‍ಕೋಟ್ ಬಳಿ ಓರ್ವ ಬೈಕ್ ಸವಾರನನ್ನು ಬಂಧಿಸಲಾಗಿದೆ. ಬೈಕ್ ನೋಂದಣಿ ಸಂಖ್ಯೆ ಹಾಗೂ ಸ್ಥಳೀಯ ಗ್ರಾಮಸ್ಥರ ಮಾಹಿತಿ ಆಧರಿಸಿ ಆತನನ್ನು ಪತ್ತೆಹಚ್ಚಲಾಗಿದೆ. ಉಳಿದ ಮೂವರು ಆರೋಪಿಗಳಲ್ಲಿ ಇಬ್ಬರು ಸೌರಾಷ್ಟ್ರದ ಅಮ್ರೇಲಿ ಜಿಲ್ಲೆಯವರು ಎಂದು ವರದಿಯಾಗಿದೆ.

 

 

ಗುಜರಾತ್‍ನ ಗಿರ್ ಅರಣ್ಯಧಾಮ ಏಷ್ಯಾಟಿಕ್ ಲಯನ್‍ಗಳ ಏಕೈಕ ನೈಸರ್ಗಿಕ ವಾಸಸ್ಥಾನವಾಗಿದೆ. 1400 ಚದರ ಅಡಿ ವಿಸ್ತೀರ್ಣದ ಈ ವನ್ಯಜೀವಿಧಾಮದಲ್ಲಿ 400 ಸಿಂಹಗಳಿವೆ. ಜೂನ್‍ನಲ್ಲಿ ಅಮ್ರೇಲಿ ಜಿಲ್ಲೆಯಲ್ಲಿ ಕಾರಿನಲ್ಲಿದ್ದ ಯುವಕರ ಗುಂಪೊಂದು ಸಿಂಹದ ಮರಿಯನ್ನು ಚೇಸ್ ಮಾಡಿದ ವಿಡಿಯೋ ಹರಿದಾಡಿತ್ತು.

https://www.youtube.com/watch?v=-6-vyqTM644

Comments

Leave a Reply

Your email address will not be published. Required fields are marked *