ಕಿಚ್ಚ ಸುದೀಪ್ ಹಾಲಿವುಡ್ ಸಿನಿಮಾದ ಫಸ್ಟ್ ಲುಕ್ ರಿಲೀಸ್

ಬೆಂಗಳೂರು: ಕನ್ನಡದ ಮಾಣಿಕ್ಯ ಸುದೀಪ್ ಅಭಿನಯಿಸುತ್ತಿರುವ ಹಾಲಿವುಡ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ರೈಸನ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ನಲ್ಲಿ ಕಿಚ್ಚ ಸುದೀಪ್ ಅಮೇರಿಕ ಮಿಲಿಟರಿ ಡ್ರೆಸ್‍ ನಲ್ಲಿ ಮಿಂಚಿದ್ದಾರೆ.

ಫಸ್ಟ್ ಲುಕ್ ನಲ್ಲಿ ಸುದೀಪ್ ಆಕರ್ಷಕ ಖಡಕ್ ಲುಕ್ ನೀಡಿದ್ದಾರೆ. ಫಸ್ಟ್ ಲುಕ್ ಜೊತೆ ಸೌಂಡ್ ಟ್ರ್ಯಾಕ್ ಕೂಡ ರಿಲೀಸ್ ಆಗಿದ್ದು, ಕಿಚ್ಚ ಸುದೀಪ್ ಹಾಲಿವುಡ್ ಮಂದಿಯ ಕಣ್ಣು ಕುಕ್ಕೋದ್ರಲ್ಲಿ ಡೌಟಿಲ್ಲ. ಅಂದಹಾಗೆ ಸಿನಿಮಾ, ರಿಯಾಲಿಟಿ ಶೋ ಎಂದು ಸಿಕ್ಕಾಪಟ್ಟೆ ಬ್ಯುಸಿ ಇರುವ ಕಿಚ್ಚ ವಿದೇಶಕ್ಕೆ ಹೋಗಿ ಚಿತ್ರಕಥೆ ಕೇಳಿ ಫೋಟೋಶೂಟ್ ಮುಗಿಸಿ ಬರೋದಕ್ಕೆ ಆಗಿರಲಿಲ್ಲ. ಹೀಗಾಗಿಯೇ ಬಿಡುವಿಲ್ಲದ ಕಿಚ್ಚನಿಗಾಗಿ ಹಾಲಿವುಡ್ ನ ರೈಸನ್ ಚಿತ್ರತಂಡ ಸಿನಿಮಾ ಕಥೆ ಹೇಳೋಕೆ ಬೆಂಗಳೂರಿಗೆ ಆಗಮಿಸಿ, ಫೋಟೋಶೂಟ್ ಕೂಡ ನಡೆಸಿತ್ತು.

ಇದನ್ನೂ ಓದಿ: ಬೆಂಗ್ಳೂರಿಗೆ ಲ್ಯಾಂಡ್ ಆಯ್ತು ಇಂಗ್ಲೀಷ್ ಸಿನಿಮಾ ತಂಡ – ಹಾಲಿವುಡ್ ನ್ನೇ ಮನೆಗೆ ಕರೆಸಿದರಲ್ಲ ಪ್ರಚಂಡ

ಹಾಲಿವುಡ್ ಎಡ್ಡಿ ಆರ್ಯ ನಿರ್ದೇಶನದ ಈ ಚಿತ್ರಕ್ಕೆ ಫಿಲಿಪ್. ಜೆ. ಪಡ್ಡೂಲ್ ಮ್ಯೂಸಿಕ್ ಇದೆ. ಪೈಲ್ವಾನ್ ಚಿತ್ರದ ಬಳಿಕ ಕಿಚ್ಚ ಸುದೀಪ್ ರೈಸನ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ.

https://www.youtube.com/watch?v=SHdc9N8lJKY

Comments

Leave a Reply

Your email address will not be published. Required fields are marked *