ಹೊಸ ಐಫೋನ್ ಕೊಳ್ಳಲು ಬ್ಯಾಂಡ್ ವಾದ್ಯದೊಂದಿಗೆ ಕುದುರೆ ಏರಿ ಹೊರಟ!

ಥಾಣೆ: ಐಫೋನ್ ಕೊಳ್ಳೋದು ಅಂದ್ರೆ ಕೆಲವರಿಗೆ ಪ್ರತಿಷ್ಠೆಯಿದ್ದಂತೆ. ಇನ್ನೂ ಕೆಲವರು ಹೊಸ ಐಫೋನ್ ಬಿಡುಗಡೆಯಾಗ್ತಿದ್ದಂತೆ ಪ್ರೀ ಬುಕಿಂಗ್ ಮಾಡಿ, ಅದನ್ನ ಪಡೆಯಲು ಆಪಲ್ ಅಂಗಡಿ ಮುಂದೆ ಕ್ಯೂ ನಿಲ್ತಾರೆ. ಇಲ್ಲೊಬ್ಬ ಯುವಕ ಇವೆಲ್ಲಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ಐಫೋನ್ ತೆಗೆದುಕೊಳ್ಳೋಕೆ ಬ್ಯಾಂಡ್ ಸಮೇತ ಕುದುರೆಯಲ್ಲಿ ಹೋಗಿದ್ದಾನೆ.

ಹೊಸ ಐಫೋನ್-ಎಕ್ಸ್ ಮೊಬೈಲ್ ಭಾರತೀಯ ಸ್ಟೋರ್‍ಗಳಿಗೆ ಬರುತ್ತಿದ್ದಂತೆ ಆಪಲ್ ಅಭಿಮಾನಿಗಳು ಅಂಗಡಿ ಮುಂದೆ ಕ್ಯೂ ನಿಂತಿದ್ರು. ಅಂಗಡಿ ತೆರೆಯೋಕೂ ಮುನ್ನವೇ ಗಂಟೆಗಟ್ಟಲೆ ಸಾಲುಗಟ್ಟಿ ನಿಂತಿದ್ರು. ಆದ್ರೆ ಅಭಿಮಾನಿ ಸಾಗರದ ಮಧ್ಯೆ ಐಫೋನ್ ಎಕ್ಸ್ ಗಿಂತ ಹೆಚ್ಚು ಎಲ್ಲರ ಗಮನ ಸೆಳೆದಿದ್ದು ಈ ಯುವಕ.

ಗುರುವಾರದಂದು ಮಹೇಶ್ ಪಲಿವಾಲ್ ಬ್ಯಾಂಡ್‍ನವರೊಂದಿಗೆ ಥಾಣೆಯ ರಸ್ತೆಗಳಲ್ಲಿ ಕುದುರೆ ಸವಾರಿ ಮಾಡುತ್ತಾ ಐಫೋನ್ ತೆಗೆದುಕೊಳ್ಳಲು ಬಂದಿದ್ದ. ಈಗಾಗಲೇ ಪ್ರೀ ಆರ್ಡರ್ ಮಾಡಿದ್ದ ಐಫೋನ್ ತೆಗೆದುಕೊಳ್ಳಲು ಹೋಗ್ತಿದ್ದ ಯುವಕ, ಈ ಲವ್ ಐಫೋನ್ ಎಕ್ಸ್ ಎಂಬ ಬ್ಯಾನರ್ ಹಿಡಿದು ಕುದುರೆ ಮೇಲೆ ಕುಳಿತಿದ್ದ.

ಪಲಿವಾಲ್ ಕುದರೆ ಮೇಲೆ ಕುಳಿತುಕೊಂಡೇ ಐಫೋನ್ ಸ್ವೀಕರಿಸಿದ್ದಾನೆ. ಆತನ ಅದೃಷ್ಟಕ್ಕೆ ಸ್ಟೋರ್ ಮಾಲೀಕ ಖುಷಿಯಿಂದಲೇ ಕುದರೆ ಏರಿದ್ದ ಪಲಿವಾಲ್‍ಗೆ ಐಫೋನ್ ನೀಡಿದ್ದಾರೆ.

ಆಪಲ್‍ನ 64 ಜಿಬಿ ಆಂತರಿಕ ಮೆಮೊರಿಯ ಐಫೋನ್ ಎಕ್ಸ್ ಬೆಲೆ 84 ಸಾವಿರ ರೂ. ಇದ್ದರೆ, 256 ಜಿಬಿ ಆಂತರಿಕ ಮೆಮರಿಯ ಫೋನಿಗೆ 1 ಲಕ್ಷದ ಎರಡು ಸಾವಿರ ರೂ. ಬೆಲೆಯಿದೆ. ಸಿಲ್ವರ್ ಮತ್ತು ಬೂದಿ ಬಣ್ಣದಲ್ಲಿ ಹೊಸ ಐಫೋನ್ ಎಕ್ಸ್ ಹ್ಯಾಂಡ್‍ ಸೆಟ್‍ಗಳು ಲಭ್ಯವಿದೆ.

https://www.youtube.com/watch?v=wsa8N1JBnxM

ಇದನ್ನೂ ಓದಿ:ಫಸ್ಟ್ ಟೈಂ ಕ್ಯಾಂಪಸ್ ಆಯ್ಕೆಗಾಗಿ ಭಾರತಕ್ಕೆ ಬರುತ್ತಿದೆ ಆಪಲ್

Comments

Leave a Reply

Your email address will not be published. Required fields are marked *