ವಿಡಿಯೋ: 1 ನಿಮಿಷದಲ್ಲಿ 212 ಹೆಚ್ಚು ವಾಲ್‍ನಟ್ಸ್ ಒಡೆದು ಹೈದರಾಬಾದ್ ವ್ಯಕ್ತಿಯಿಂದ ವಿಶ್ವ ದಾಖಲೆ

ಹೈದರಾಬಾದ್: 1 ನಿಮಿಷದಲ್ಲಿ ಕೈಯಿಂದ ಸುಮಾರು 200 ಕ್ಕಿಂತ ಹೆಚ್ಚು ವಾಲ್‍ನಟ್ಸ್ ಗಳನ್ನು (ಅಕ್ರೋಟ್) ಪುಡಿಪುಡಿ ಮಾಡಿ ಆಂಧ್ರದ ವ್ಯಕ್ತಿಯೊಬ್ಬರು ವಿಶ್ವದಾಖಲೆ ನಿರ್ಮಿಸಿದ್ದಾರೆ.

ಸಮರ ಕಲೆಗಳ ಮಾಸ್ಟರ್ ಆಗಿರುವ ಪಿ. ಪ್ರಭಾಕರ್ ರೆಡ್ಡಿ ಎಂಬವರು 60 ಸೆಕೆಂಡ್ ಒಳಗಡೆ 212 ವಾಲ್‍ನಟ್ಸ್ ಗಳನ್ನು ಒಡೆದು ಹಾಕಿರುವ ವಿಡಿಯೋವನ್ನು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಂಸ್ಥೆ ಯುಟ್ಯೂಬ್‍ಗೆ ಅಪ್ಲೋಡ್ ಮಾಡಿದೆ.

ಒಂದು ಮರದ ಟೇಬಲ್ ಮೇಲೆ ಸಾಲು ಸಾಲಾಗಿ ವಾಲ್‍ನಟ್ಸ್ ಗಳನ್ನು ಜೋಡಿಸಿದ್ದು, ಅವುಗಳಿಗೆ ಯಾವುದೇ ರೀತಿಯ ಹಾನಿಯಾಗದಂತೆ ಒಡೆದಿರುವುದನ್ನು ಖಚಿತ ಪಡಿಸಿಕೊಳ್ಳಲು ಪ್ರತ್ಯಕ್ಷ ದರ್ಶಿಗಳನ್ನು ನೇಮಿಸಲಾಗಿತ್ತು ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ತಿಳಿಸಿದೆ.

ಅಂತಿಮ ಹಂತದಲ್ಲಿ ಎಣಿಕೆ ಮಾಡುವಾಗ ವಾಲ್‍ನಟ್ಸ್ ಗಳ ಚಿಪ್ಪುಗಳನ್ನು ಕನಿಷ್ಠ ಎರಡು ತುಂಡುಗಳಾಗಿ ಒಡೆದಿರಬೇಕು ಎಂದು ಸೂಚಿಸಲಾಗಿತ್ತು. 35 ವರ್ಷದ ರೆಡ್ಡಿ ಸಮರ ಕಲೆಯ ಮಾಸ್ಟರ್ ಈ ದಾಖಲೆ ಮಾಡಲು ಪ್ರತಿನಿತ್ಯ ತರಬೇತಿ ಮಾಡಿ ನಂತರ ಈ ದಾಖಲೆ ಮಾಡಿದ್ದಾರೆ.

ಈ ಹಿಂದೆ ಪಾಕಿಸ್ತಾನದ ಮೊಹಮ್ಮದ್ ರಶೀದ್ ಎಂಬುವರು 210 ನಟ್ಸ್ ಒಡೆದಿದ್ದರು. ಆದರೆ ಈಗ ರೆಡ್ಡಿ ಅವರು 212 ನಟ್ಸ್ ಒಡೆಯುವ ಮೂಲಕ ತಮ್ಮ ಹೆಸರಿಗೆ ದಾಖಲೆಯನ್ನು ವರ್ಗಾಯಿಸಿದ್ದಾರೆ.

ಎಷ್ಟೇ ಅನುಭವಗಳಿದ್ದರೂ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವ ವ್ಯಕ್ತಿಗಳ ಕೈಗೆ ಯಾವುದೇ ರೀತಿ ಅಪಾಯವಾಗದೇ ಇರಲು ಬಟ್ಟೆಯ ಗ್ಲೌಸ್ ಹಾಕಿಕೊಳ್ಳಲು ಅನುಮತಿ ನೀಡಲಾಗುತ್ತದೆ.


Comments

Leave a Reply

Your email address will not be published. Required fields are marked *