ಹೈದರಾಬಾದ್: ನಿಮ್ಮ ಮಕ್ಕಳು ಅಂಗಡಿಯಿಂದ ಚಿಪ್ಸ್ ಅಥವಾ ಇತರೆ ರೀತಿಯ ಪ್ಯಾಕೇಜ್ಡ್ ತಿಂಡಿ ತಂದು ತಿನ್ನುವಾಗ ಸ್ವಲ್ಪ ಎಚ್ಚರ ವಹಿಸಿ. ಕುರುಕಲು ತಿಂಡಿ ಮಕ್ಕಳ ಆರೋಗ್ಯವನ್ನ ಹಾಳು ಮಾಡುವುದರ ಜೊತೆಗೆ ಅವರ ಪ್ರಾಣಕ್ಕೂ ಕುತ್ತು ತರಬಹುದು. ಬಾಲಕನೊಬ್ಬ ಮಕ್ಕಳ ತಿಂಡಿಯಾದ ರಿಂಗ್ಸ್ ಪ್ಯಾಕೆಟ್ನಲ್ಲಿದ್ದ ಆಟಿಕೆ ನುಂಗಿ ಸಾವನ್ನಪ್ಪಿರೋ ಘಟನೆ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಬುಧವಾರದಂದು ನಡೆದಿದೆ.

ಇಲ್ಲಿನ ಏಳೂರಿನ ಕುಮ್ಮಾರಾ ರೇವು ಪ್ರದೇಶದಲ್ಲಿ 4 ವರ್ಷದ ಬಾಲಕ ನಿರೀಕ್ಷಣ್ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ. ಮಕ್ಕಳ ತಿಂಡಿಯಾದ ರಿಂಗ್ಸ್ ಪ್ಯಾಕೆಟ್ನಲ್ಲಿ ಸಾಮಾನ್ಯವಾಗಿ ಒಂದು ಚಿಕ್ಕ ಆಟಿಕೆ ಇರುತ್ತದೆ. ಇದನ್ನ ಬಾಲಕ ನುಂಗಿದ್ದಾನೆ. ಕೂಡಲೇ ಪೋಷಕರು ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರಾದ್ರೂ ಯಾವುದೇ ಪ್ರಯೋಜನವಾಗಿಲ್ಲ.

ಬಾಲಕ ಆಕಸ್ಮಿಕವಾಗಿ ಆಟಿಕೆಯನ್ನ ನುಂಗಿದನೋ ಅಥವಾ ಅದು ತಿನ್ನುವ ವಸ್ತು ಎಂದುಕೊಂಡು ನುಂಗಿದನೋ ಗೊತ್ತಿಲ್ಲ.
ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.




ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ! https://t.co/JG4lTQgawC#Mangaluru #Baby #Chakkuli pic.twitter.com/n8ouJvVJwe
— PublicTV (@publictvnews) October 31, 2017

Leave a Reply