ಬೀದರ್: ಎಲ್ಲಾ ಸರಿ ಇದ್ರು ಏನು ಮಾಡದೆ ಇರುವ ಮನುಷ್ಯರ ಮಧ್ಯೆ ವಿಕಚೇತನನಾಗಿದ್ರು ನಾನು ಯಾರಿಗೂ ಭಾರವಾಗಬಾರದು ಎಂದು ಪಣ ತೊಟ್ಟಿದ್ದಾರೆ ಈ ವಿಕಲಚೇತನ ಯುವಕ.
ಹೌದು, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಸಿದ್ದೇಶ್ವರ್ ಗ್ರಾಮದಲ್ಲಿರುವ ಪ್ರದೀಪ್ ತಳವಾಡೆ ಎಂಬ ಯುವಕ ಹುಟ್ಟಿನಿಂದಲೇ ಅಂಧನಾಗಿದ್ದಾರೆ. ಆದರೂ ಎದೆಗುಂದದೆ ಮನೆಯ ಮುಂದಿನ ಶೆಡ್ನಲ್ಲಿ ಮೋಬೈಲ್ಗೆ ಕರೆನ್ಸಿ ರಿಚಾರ್ಜ್ ಮಾಡಿಕೊಂಡು ಸ್ವಾವಲಂಬಿಯಾಗಿ ಬದುಕುತ್ತಿದ್ದಾರೆ. ಅಷ್ಟೇ ಅಲ್ಲ ಇವರು ಕ್ರಿಕೆಟ್ ಕಾಮೇಂಟ್ರಿ, ನ್ಯೂಸ್ ಆಂಕರಿಂಗ್ ಹೀಗೆ ಹಲವರ ಮಿಮಿಕ್ರಿ ಮಾಡಿ ಅಷ್ಟೋ ಇಷ್ಟೋ ಗಳಿಸುತ್ತಾರೆ.
ಆದ್ರೆ ಕರೆನ್ಸಿ ರಿಚಾರ್ಜ್ನಲ್ಲಿ ನಿಯಮಿತ ಆದಾಯವಿಲ್ಲ ಹಾಗಾಗಿ ಭಾಲ್ಕಿ ಮುಖ್ಯರಸ್ತೆಯಲ್ಲಿ ಯಾರಾದ್ರೂ ಒಂದು ಪಾನ್ ಶಾಪ್ ಹಾಕಿಕೊಟ್ರೆ ಕಷ್ಟಪಟ್ಟು ದುಡಿದು ಹೆತ್ತವರನ್ನ ಸಾಕುತ್ತೇನೆ ಅಂತ ಇದೀಗ ಈ ಯುವಕ ಸಹಾಯ ಹಸ್ತ ಚಾಚಿದ್ದಾರೆ.
ಇವರ ಕುಟುಂಬದಲ್ಲಿ ಒಟ್ಟು 5 ಜನವಿದ್ದು, ಪೋಷಕರು ಕೂಲಿ ಕೆಲಸ ಮಾಡಿ ಪ್ರತಿದಿನ 100 ರಿಂದ 200 ರೂ ಸಂಪಾದನೆ ಮಾಡುತ್ತಿದ್ದಾರೆ. ಆದ್ರೆ ಅದು ಒಂದು ಹೊತ್ತಿನ ಊಟಕ್ಕೆ ಸಾಕಾಗುತ್ತದೆ. ಸ್ವಾಭಿಮಾನಿ ಪ್ರದೀಪರಿಗೆ ಬೆಳಕು ಮೂಲಕ ಸಹಾಯ ಸಿಕ್ಕಿ ಅವರ ಕಷ್ಟಗಳು ದೂರಾಗಿ ಅವನ ಕಲೆ ಇನ್ನಷ್ಟು ಜನರಿಗೆ ಮಾದರಿಯಾಗಲಿ ಅಂತ ಪ್ರದೀಪ್ ಗೆಳೆಯರ ಹಾರೈಕೆ.
ಒಟ್ಟಿನಲ್ಲಿ ಮನಸು ಮಾಡಿದ್ರೆ ಯಾರು ಬೇಕಾದ್ರು ಸಾಧನೆ ಮಾಡಬಹುದು ಎಂದು ತನ್ನ ಕಲೆ ಮತ್ತು ಸಾಹಸಿ ಧೋರಣೆಯ ಮೂಲಕ ತೋರಿಸಿಕೊಟ್ಟಿರುವ ಈ ವಿಕಚೇತನನ ಬಾಳಲ್ಲಿ ಬೆಳಕು ಮೂಡಲಿ ಎಂಬುದೇ ನಮ್ಮ ಆಶಯ.
https://www.youtube.com/watch?v=I1trT37voYI






Leave a Reply